ಸುದ್ಧಿಕನ್ನಡ ವಾರ್ತೆ
ಪಣಜಿ: ವಿದ್ಯಾರ್ಥಿಗಳ ಕೊರತೆಯಿಂದಾಗಿ ಬಂದ್ ಆಗಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಕರ್ನಾಟಕದ ಮಠವೊಂದಕ್ಕೆ ನೀಡಿದ್ದರಿಂದ ಸ್ಥಳೀಯವಾಗಿ ವಿರೋಧ ವ್ಯಕ್ತವಾದ ಘಟನೆ ಗೋವಾದ ಪೆಡ್ನೆ ತಾಲೂಕಿನ ಕಾತುರ್ಲಿ-ತುಯೆ ಗ್ರಾಮದಲ್ಲಿ ನಡೆದಿದೆ.

ಈ ಗ್ರಾಮದಲ್ಲಿ ಇದ್ದ ಸರ್ಕಾರಿ ಪ್ರಾಥಮಿಕ ಶಾಲೆಯೊಂದು ವಿದ್ಯಾರ್ಥಿಗಳ ಸಂಖ್ಯಆ ಅಭಾವದಿಂದಾಗಿ ಕಳೆದ ಕೆಲ ವರ್ಷಗಳಿಂದ ಬಂದ್ ಆಗಿತ್ತು. ಇದೇ ಶಾಲೆಯ ಕಟ್ಟಡ ಅಂದಿನಿಂದಲೂ ಬಂದ್ ಆಗಿಯೇ ಉಳಿದಿತ್ತು. ಈ ಕಟ್ಟಡವನ್ನು ಗೋವಾದ ಶಿಕ್ಷಣ ಇಲಾಖೆಯ ಮೂಲಕ ಕರ್ನಾಟಕದ ಮಠವೊಂದು ಪಡೆದುಕೊಂಡಿತ್ತು.

ಕರ್ನಾಟಕ ಮೂಲದ ಮಠದ ಶಿಷ್ಯರೋರ್ವರು ಈ ಶಾಲೆಯ ಬಾಗಿಲು ತೆರೆಯಲು ಬಂದಾಗ ಸ್ಥಳೀಯ ಜನರು ಅದಕ್ಕೆ ಅಡ್ಡಿ ಪಡಿಸಿ ಪ್ರಶ್ನಿಸಿ ವಿರೋಧ ವ್ಯಕ್ತಪಡಿಸಿದ ಘಟನೆ ಕೂಡ ನಡೆದಿದೆ. ಸರ್ಕಾರವು ಕರ್ನಾಟಕದ ಮಠಕ್ಕೆ ನೀಡಿದ್ದ ಪರವಾನಗಿಯನ್ನು ಹಿಂಪಡೆಯಬೇಕು ಎಂದು ಸ್ಥಳೀಯರು ಆಘ್ರಹಿಸಿದ್ದಾರೆ.