ಸುದ್ಧಿಕನ್ನಡ ವಾರ್ತೆ
ಪಣಜಿ: ಮಹದಾಯಿ ನದಿ ನೀರನ್ನು ಕರ್ನಾಟಕವು ತಿರುಗಿಸಿಕೊಳ್ಳಲು ನಡೆಸಿರುವ ಪ್ರಯತ್ನದ ಕಾಮಗಾರಿಯನ್ನು ಮಹದಾಯಿ ಪ್ರವಾಹ ಪ್ರಾಧಿಕಾರ ವೀಕ್ಷಣೆ ನಡೆಸಬೇಕು. ಈ ನಿಟ್ಟಿನಲ್ಲಿ ಸರ್ವೋಚ್ಛ ನ್ಯಾಯಾಲಯವು ಆದೇಶಿಸಬೇಕು ಎಂದು ಗೋವಾ ರಾಜ್ಯ ಸರ್ಕಾರವು ಮನವಿ ಮಾಡಲಿದೆ. ಈ ಕುರಿತಂತೆ ಮಹದಾಯಿ ಸಭಾಗೃಹ ಸಮೀತಿ ಬೈಠಕ್ ನಲ್ಲಿ ನಿರ್ಣಯ ತೆಗೆದುಕೊಂಡಿದೆ.
ಗೋವಾ ರಾಜ್ಯ ಸಲಸಂಪನ್ಮೂಲ ಸಚಿವ ಸುಭಾಷ್ ಶಿರೋಡಕರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಶಾಸಕ ಮೈಕಲ್ ಲೋಬೊ ಬೈಠಕ್ ನಲ್ಲಿ ಮಾತನಾಡಿ- ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಳ್ಳಲು ಆರಂಭಿಸಿದೆ. ಅಲ್ಲಿ ಕಾಂಕ್ರೀಟ್ ತಡೆಗೋಡೆ ಕಟ್ಟುವುದು ಒಂದೇ ಬಾಕಿ ಉಳಿದಿದೆ. ಮಲಪ್ರಭಾ ಸದಿ ಪಾತ್ರದಲ್ಲಿ ಮಹದಾಯಿ ನದಿ ನೀರನ್ನು ತಿರುಗಿಸಿಕೊಳ್ಳಲು ಕರ್ನಾಟಕವು ಒಂದು ಗೇಟ್ ನಿರ್ಮಿಸಿದೆ. ಈ ಗೇಟ್ ಬಂದ್ ಇದೆ ಎಂದು ಹೇಳಲಾಗುತ್ತಿದೆ, ಆದರೆ ಈ ಗೇಟ್ ತೆರೆದೇ ಇದೆ. ಹೆದ್ದಾರಿಗೆ ಹೊಂದಿಕೊಂಡೇ ಈ ಗೇಟ್ ಇರುವುದರಿಂದ ಇದು ಕೂಡಲೇ ಗಮನಕ್ಕೆ ಬರುವಂತೆಯೇ ಇದೆ. ಕರ್ನಾಟಕವು ಕಳಸಾ ಬಂದೂರಿ ಪ್ರೊಜೆಕ್ಟ ವೀಕ್ಷಿಸಲು ಅವಲಾಶ ನೀಡುತ್ತಿಲ್ಲ. ನಾವು ಕಳೆದ ಬಾರಿ ಕರ್ನಾಟಕಕ್ಕೆ ಈ ಪ್ರೊಜೆಕ್ಟ ವೀಕ್ಷಿಸಲು ತೆರಳಿದ್ದ ಸಂದರ್ಭದಲ್ಲಿ ಅವರು ಸಹಕಾರ ನೀಡಿಲ್ಲ. ಸ್ಥಳೀಯರು ನಮಗೆ ಕಲ್ಲು ಮತ್ತು ಕೋಲು ಹಿಡಿದು ಬರುತ್ತಾರೆ. 2019 ರ ಚಿತ್ರದಲ್ಲಿ ಮಹದಾಯಿ ನದಿ ನೀರನ್ನು ಕರ್ನಾಟಕವು ತಿರುಗಿಸಿಕೊಂಡಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ನ್ಯಾಯಾಲಯದಲ್ಲಿ ಈ ವಿಷಯವನ್ನು ಸ್ಪಷ್ಠವಾಗಿ ಮಂಡಿಸುವ ಅಗತ್ಯವಿದೆ ಎಂದು ಶಾಸಕ ಮೈಕಲ್ ಲೋಬೊ ಸಭಾಗೃಹ ಸಮೀತಿ ಬೈಠಕ್ ನಲ್ಲಿ ಅಭಿಪ್ರಾಯಪಟ್ಟರು.
ಗೋವಾ ರಾಜ್ಯ ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ಸುದ್ಧಿಗಾರರೊಂದಿಗೆ ಮಾತನಾಡಿ- ಕಳಸಾ ಬಂಡೂರಿ ಪ್ರೊಜೆಕ್ಟನ್ನು ಜಂಟಿಯಾಗಿ ವೀಕ್ಷಿಸಲು ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಅಗತ್ಯವಿದೆ. ಮೂರೂ ರಾಜ್ಯಗಳ ಅಧಿಕಾರಿಗಳು ಈ ಪ್ರೊಜೆಕ್ಟ ನ್ನು ಜಂಟಿಯಾಗಿ ವೀಕ್ಷಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ವರದಿ ಸಲ್ಲಿಸಬೇಕು. ಈ ಆಧಾರದ ಮೇಲೆ ಸರ್ವೋಚ್ಛ ನ್ಯಾಯಾಲಯವು ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ನವೆಂಬರ್ ನಲ್ಲಿ ಗೋವಾ ರಾಜ್ಯವು ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿದೆ ಎಂಬ ಮಾಹಿತಿ ನೀಡಿದರು.
