ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಸಾಹಸಿ ಪ್ರವಾಸೋದ್ಯಮದ ಅಡಿಯಲ್ಲಿ ಪ್ರವಾಸಿಗರ ಜೀವದೊಂದಿಗೆ ಆಟವಾಡಲಾಗುತ್ತಿದೆಯೇ….? ಎಂಬ ಪ್ರಶ್ನೆ ಉದ್ಭವವಾಗಿದೆ. ಇದೀಗ ದಕ್ಷಿಣ ಗೋವಾದ ವಾರ್ಕಾ ಸಮುದ್ರ ತೀರದಲ್ಲಿ ಈ ಘಟನೆ ನಡೆದಿದೆ.
ಪ್ಯಾರಾಶೂಟ್ ಕೆಳಗಿಳಿಯುತ್ತಿದ್ದ ಸಂದರ್ಭದಲ್ಲಿ ಅದು ತೆಂಗಿನ ಮರಕ್ಕೆ ಸಿಲುಕಿಕೊಂಡಿದ್ದರಿಂದ ದೊಡ್ಡದುರ್ಘಟನೆಯೊಂದು ನಡೆಯುತ್ತಿತ್ತು. ಆದರೆ ಅದೃಷ್ಟವಶಾತ್ ಪ್ಯಾರಾಶೂಟ್ ಕೆಳಗೆ ಇಳಿಯುತ್ತಿದ್ದಂತೆಯೇ ಪ್ರವಾಸಿಗ ಪ್ಯಾರಾಶೂಟ್ ನಿಂದ ಕೆಲವೇ ಮೀಟರ್ ಎತ್ತರದಿಂದ ಕೆಳಕ್ಕೆ ಜಿಗಿದಿದ್ದಾನೆ. ಇದರಿಂದಾಗಿ ಈತನ ಜೀವ ಉಳಿದಂತಾಗಿದೆ.
ಇಂತಹ ದುರ್ಘಟನೆ ನಡೆದ ಸಂದರ್ಭದಲ್ಲಿಯೂ ಕೂಡ ಪ್ಯಾರಾಶೂಟ್ ಆಪರೇಟರ್ ಮರಕ್ಕೆ ಸಿಲುಕಿಕೊಂಡಿದ್ದ ಪ್ಯಾರಾಶೂಟ್ ತೆಗೆಯುವ ಪ್ರಯತ್ನ ನಡೆಯುತ್ತಿರುವಾಗಲೇ ಮತ್ತೊಂದು ಪ್ಯಾರಾಶೂಟ್ನಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹಾರಲು ಆರಂಭಿಸಿದ್ದ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಉತ್ತರ ಗೋವಾದ ಕೇರಿ ಯಲ್ಲಿ ಪ್ಯಾರಾಗ್ಲೈಂಡಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಪುಣೆಯ ಪ್ರವಾಸಿಗ ಸಾವನ್ನಪ್ಪಿದ್ದ, ಈತನೊಂದಿಗೆ ಇದ್ದ ನೇಪಾಳಿಯ ಆಪರೇಟರ್ ಕೂಡ ಜೀವ ಕಳೆದುಕೊಂಡಿದ್ದ. ಅಂದು ಪ್ಯಾರಾಗ್ಲೈಂಡಿಂಗ್ ಗೆ ನಿಬರ್ಂಧ ಹೇರುವ ನಿರ್ಣಯ ತೆಗೆದುಕೊಳ್ಳಲಾಗಿತ್ತು ಆದರೆ ಇದೀಗ ಈ ನಿರ್ಣಯ ಕೇವಲ ಕಾಗದಪತ್ರದಲ್ಲಿ ಮಾತ್ರ ಉಳಿದುಕೊಂಡಂತೆ ಕಂಡುಬರುತ್ತದೆ.
