ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಪರ್ಯೆ ಹಾಗೂ ಪೊಡೊಶೆ ಈ ಊರಿನಿಂದ ಹರಿಯುವ ವಾಳವಂಟಿ ನಲ್ಲಿಯಲ್ಲಿ ಪೊಂಡಾದಲ್ಲಿ ಸುಮಾರು 10 ನೇಯ ಶತಮಾನದ ಕದಂಬ ರಾಜರ ಕಾಲದ ಕೇಳಬಾಯ್ ದೇವಿಯ ಮೂರ್ತಿ ಪತ್ತೆಯಾಗಿದೆ.

ವಾಳವಂಟಿ ನದಿಯಲ್ಲಿ ವೇದಾಂತ ಕೇರಕರ್ ಎಂಬುವರಿಗೆ ಈ ಮೂರ್ತಿ ಕಂಡುಬಂದಿದೆ. ನಂತರ ಅವರು ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್ ರವರಿಗೆ ಈ ಮಾಹಿತಿ ನೀಡಿದ್ದಾರೆ. ನಂತರ ಅವರು ಪುರಾತತ್ವ ಶಾಸ್ತ್ರ ವಿದ್ಯಾರ್ಥಿ ವಿಠೋಬಾ ಗಾವಡೆ ಹಾಗೂ ಸೂರಜ್ ಮಲಿಕ್ ರವರೊಡಗೂಡಿ ನದಿಯಿಂದ ಈ ಮೂರ್ತಿಯನ್ನು ಮೇಲಕ್ಕೆತ್ತಿದ್ದಾರೆ. ಈ ಮೂರ್ತಿ ಅತ್ಯಂತ ಸುಂದರವಾಗಿದೆ ಎನ್ನಲಾಗಿದೆ.

ಈ ಕುರಿತಂತೆ ರಾಜೇಂದ್ರ ಕೇರಕರ್ ಮಾಹಿತಿ ನೀಡಿ- ಇದು ಕೇಳಬಾಯ್ ಗಜಾಂತಲಕ್ಷ್ಮೀ ಮೂರ್ತಿಯಾಗಿದ್ದು ಇದನ್ನು ಸಮೃದ್ಧಿಯ ದೇವತೆ ಎಂದೇ ಕರೆಯಲಾಗುತ್ತದೆ. ಕದಂಬ ರಾಜರ ಕಾಲದ ಹಲವು ಮಾಹಿತಿಯನ್ನ ಈ ಮೂರ್ತಿಯಲ್ಲಿ ಕಾಣಬಹುದಾಗಿದೆ.

ಈ ಮೂರ್ತಿಯನ್ನು ರಾಜ್ಯ ಪುರಾತತ್ವ ವಸ್ತು ಸಂಗ್ರಹಾಲಯದ ಸಂಚಾಲಕ ಡಾ. ವಾಸು ಉಸಪಕರ್ ಹಾಗೂ ಅಧಿಕಾರಿ ಮನೀಷ ಗೋವೇಕರ್ ರವರಿಗೆ ಒಪ್ಪಿಸಲಾಗಿದೆ.