ಸುದ್ಧಿಕನ್ನಡ ವಾರ್ತೆ
ಪಣಜಿ: ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ವರ್ಷದ ತಮ್ಮ ಪದ್ಧತಿಯಂತೆಯೇ ಸೋಮವಾರ ಐಎನ್ ಎಸ್ ವಿಕ್ರಾಂತ್ ಈ ಯುದ್ಧ ನೌಕೆಯಲ್ಲಿ ನೌಕಾದಳದ ಕರ್ಮಚಾರಿಗಳೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದರು. ಗೋವಾ ಹಾಗೂ ಕಾರವಾರ ನಡುವೆ ಸಮುದ್ರದಲ್ಲಿರುವ ಹಡಗಿನಲ್ಲಿ ಈ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ- ಆಪರೇಶನ್ ಸಿಂಧೂರ್ ಉಲ್ಲೇಖಿಸಿ- ಜಮ್ಮೂ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರಗಾಮಿ ಧಾಳಿಯ ಪ್ರತ್ಯುತ್ತರವಾಗಿ ಮೇ 7 ರಂದು ನಡೆಸಿದ ಆಪರೇಶನ್ ಸಿಂಧೂರ್ ಕಾರ್ಯಾಚರಣೆಯನ್ನು ಉಲ್ಲೇಖಿಸಿದರು. ವಿಕ್ರಾಂತ್ ನೌಕೆಯು ಸಂಪೂರ್ಣ ಪಾಕಿಸ್ತಾನವನ್ನು ನಿದ್ರಾನಾಶಗೊಳಿಸಿದೆ. ನೌಕಾದಳವು ಹುಟ್ಟಿಸಿದ ಭೀತಿಯನ್ನು ವಾಯುಸೇನೆಯು ಅಸಾಧಾರಣ ಕೌಶಲ್ಯ ಹಾಗೂ ಭೂಸೇನೆಯು ಶೌರ್ಯ ಈ ಮೂರು ದಳಗಳ ಸಮನ್ವಯದಿಂದಾಗಿ ಆಪರೇಶನ್ ಸಿಂಧೂರ್ ಯಶಸ್ವಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದರು.
ಆಪರೇಶನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಬ್ರಹ್ಮೋಸ್ ಹಾಗೂ ಆಕಾಶ್ ಈ ಕ್ಷಿಪಣಿಗಳು ತಮ್ಮ ಕ್ಷಮತೆಯನ್ನು ಸಿದ್ಧಪಡಿಸಿವೆ. ಹಲವು ದೇಶಗಳು ಈ ಕ್ಷಿಪಣಿ ಖರೀದಿಸಲು ಉತ್ಸಾಹ ತೋರಿವೆ. ದೇಶದ ರಕ್ಷಣೆ ಮಾಡುವ ನಮ್ಮ ಸುರಕ್ಷಾ ಕರ್ಮಚಾರಿಗಳನ್ನು ದೀಪಾವಳಿಯ ಸಂದರ್ಭದಲ್ಲಿ ಭೇಟಿ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.
