ಸುದ್ದಿ ಕನ್ನಡ ವಾರ್ತೆ

ಪಣಜಿ: ಗೋವಾ ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಹಬ್ಬದ ದಿನ ಬೆಳಗಿನ ಜಾವ ಹಣಕಾಸುರನ ದಹನ ಮಾಡಿ ಅಭ್ಯಂಗ ಸ್ನಾನ ಮಾಡುವ ಪದ್ಧತಿ ಇದೆ.

ಗೋವಾದಲ್ಲಿ ಗಲ್ಲಿ ಗಲ್ಲಿಗಳಲ್ಲಿ ನರಕಾಸುರ ಪ್ರತಿಮೆಯನ್ನು ಸಿದ್ಧಪಡಿಸಲಾಗಿದೆ. ಇಂದು ರಾತ್ರಿ ನರಕಾಸುರ ಪ್ರದರ್ಶನ ಎಲ್ಲೆಡೆ ನಡೆಯಲಿದ್ದು ನಾಳೆ ಅಂದರೆ ಸೋಮವಾರ ಬೆಳಗಿನ ಜಾವ ಈ ನರಕಾಸುರ ಪ್ರತಿಮೆಗಳ ದಹನ ಮಾಡಲಾಗುತ್ತದೆ. ನಂತರ ಅಭ್ಯಂಗ ಸ್ನಾನ ಮಾಡಿ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

ಗೋವಾದ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದ ಜೋರಾಗಿದ್ದು ಹಬ್ಬಕ್ಕಾಗಿ ಹೂವು ಹಣ್ಣು ಹಣತೆ ದೀಪಾಲಂಕಾರ ಹೀಗೆ ವಿವಿಧ ವಸ್ತುಗಳು ಖರೀದಿಗಾಗಿ ಜನರು ಆಗಮಿಸುತ್ತಿದ್ದಾರೆ.

ಗೋವಾದಲ್ಲಿ ಮಂಗಳವಾರ ದಿನ ಅಮಾವಾಸ್ಯೆಯ ಲಕ್ಷ್ಮಿ ಪೂಜೆ ನೆರವೇರಿಸಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಕೂಡ ಸಿದ್ಧತಾ ಕಾರ್ಯ ಮನೆಮನೆಗಳಲ್ಲಿ ಬರದಿಂದ ಸಾಗಿದೆ.