ಸುದ್ಧಿಕನ್ನಡ ವಾರ್ತೆ
ಪಣಜಿ: ಕರ್ನಾಟಕದಿಂದ ಗೋವಾಕ್ಕೆ ಬಂದು ನೆಲೆಸಿ ಬಾಯ್ ಫ್ರೆಂಡ್ ನೊಂದಿಗೆ ಸೇರಿ ಹೆತ್ತ ತಾಯಿಯೇ ತನ್ನ ಎರಡೂವರೆ ವರ್ಷದ ಮಗಳನ್ನು ಕೊಲೆ ನಡೆಸಿದ ಭೀಕರ ಘಟನೆ ಗೋವಾದ ಬಿಚೋಲಿಯ ಮಾವಳಿಂಗೆ ಊರಿನಲ್ಲಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾದ ಮಾಹಿತಿಯ ಅನುಸಾರ- ತನ್ನ ಗಂಡನಿಂದ ಹುಟ್ಟಿದ ಮಗು ಇಷ್ಟವಾಗದ ಕಾರಣ ತನ್ನ ಬಾಯ್ ಫ್ರೆಂಡ್ ನೊಂದಿಗೆ ಸೇರಿ ತನ್ನ ಎರಡೂವರೆ ವರ್ಷದ ಮಗಳನ್ನೇ ತಾಯಿ ಕೊಲೆಗೈದಿದ್ದಾಳೆ ಎಂಬ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಗೋವಾದ ಬಿಚೋಲಿ ಪೋಲಿಸರು ಈ ಕುರಿತಂತೆ ಶಂಕಿತ ಮಹಿಳೆ (ನಾಗಮ್ಮ,28) ಹಾಗೂ ಆಕೆಯ ಬಾಯ್ ಫ್ರೆಂಸ್ (ನಿತಿನ್) ವಿರುದ್ಧ ಪ್ರಕರಣ ದಾಖಲಿಸಿಕೊಂಡು ಈ ಇಬ್ಬರನ್ನೂ ಬಂಧಿಸಿದ್ದಾರೆ. ಸದ್ಯ ಇವರಿಬ್ಬರೂ ಗೋವಾದ ಬಿಚೋಲಿಯ ಬಿಚೋಲಿಯ ಮಾವಳಿಂಗ ಊರಿನಲ್ಲಿ ವಾಸಿಸುತ್ತಿದ್ದರು. ಇವರಿಬ್ಬರೂ ಉತ್ತರ ಕರ್ನಾಟಕ ಮೂಲದವರಾಗಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯಾದ ಬಾಲಕಿಯ ದೇಹದಲ್ಲಿ ಹಲ್ಲೆಯ ಗುರುತು ಪತ್ತೆಯಾಗಿರುವುದರಿಂದ ಇದೊಂದು ಕೊಲೆ ಎಂದು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಗಮ್ಮಳಿಗೆ ಇವಳ ಗಂಡನಿಂದ ಜನಿಸಿದ ಮಗಳು ಈಕೆಗೂ ಆಗೂ ಈಕೆಯ ಬಾಯ್ ಫ್ರೆಂಡ್ ಗೂ ಇಷ್ಟವಾಗುತ್ತಿರಲಿಲ್ಲ. ಇವರಿಬ್ಬರೂ ಮಗಳಿಗೆ ಯಾವಾಗಲೂ ಬೈಯ್ಯುತ್ತಲೇ ಇರುತ್ತಿದ್ದರು. ಇಷ್ಟೇ ಅಲ್ಲದೆಯೇ ಇಬ್ಬರೂ ಕೂಡ ಮಗಳಿಗೆ ಹಲ್ಲೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ಗೋವಾದ ಬಿಚೋಲಿ ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
