ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮಡಗಾಂವ್ ನೇಸಾಯಿ ಗೇಟ್ ಬಳಿ ಮನೆ ಒಂದರಲ್ಲಿ ನಡೆಯುತ್ತಿದ್ದ ಆನ್ಲೈನ್ ಜೂಜು ಅಡ್ಡೆಯ ಮೇಲೆ ಮೈನಾ-ಕುಡತರಿ ಪೆÇಲೀಸರು ದಾಳಿ ನಡೆಸಿ 4,40,000 ರೂ ಜಪ್ತಿ ಮಾಡಿ, ಜೂಜು ಆಡುತ್ತಿದ್ದ ಹಲವರನ್ನು ಬಂಧಿಸಿದ್ದಾರೆ.

ರತ್ನಾಕರ್ ಕೆಲವೇಕರ್, ಸಚಿನ್ ಸಿಂಗ್, ಇರ್ಫಾನ್ ಬಿಡಗಿ, ರಾಣಿ ಮೋರೆಸ್, ಹನುಮಂತ ಲಮಾಣಿ, ಪರಸಪ್ಪ ಲಮಾಣಿ, ಆಶಿಶ್ ಈರೇಕರ್, ಅಭಿಷೇಕ್ ಚೊಬೆ, ಮೊಹಮ್ಮದ್ ಸನಾಗರ್, ಇಸ್ಮಾಯಿಲ್ ಬೇಪಾರಿ, ಫಿರೋಜ್ ಧಾರವಾಡಕರ್, ಆಗ್ನೇಲ್ ಡಿಸೋಜಾ, ಸಿಕಂದರ್ ಲಿಂಬುಬಳೆ, ಸರ್ವರ್ ಭಾಷಾ ಗುಟ್ಟಾಳ, ಶ್ರವಣ ಕುಮಾರ್, ದೇವೇಂದ್ರ ಸಾಬಸರಿ ಎಂಬುವರನ್ನು ಪೆÇಲೀಸರು ಬಂದಿಸಿದ್ದಾರೆ.

ಜೂಜು ನಿಬರ್ಂಧ ಕಾಯ್ದೆ ಅಡಿಯಲ್ಲಿ ಪೆÇಲೀಸರು ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪೆÇಲೀಸರು ಈ ಪ್ರಕರಣದಲ್ಲಿ 4,40,000 ಹಣವನ್ನು ಜಪ್ತಿ ಮಾಡಿದ್ದಾರೆ. ಇಷ್ಟೇ ಅಲ್ಲದೆ 4 ಟ್ಯಾಬ್, ರೌಟರ್, ಮೋಡೆಮ್, ಗಳನ್ನು ಕೂಡ ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಪೆÇಲೀಸ್ ನಿರೀಕ್ಷಕ ಅರುಣ್ ಗಾವಸ್ ದೇಸಾಯಿ ರವರ ಮಾರ್ಗದರ್ಶನದಲ್ಲಿ ಪೆÇಲೀಸ್ ಉಪನಿರೀಕ್ಷಕ ಗೌರವ ನಾಯಕ್ ಹೆಚ್ಚಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.