ಸುದ್ಧಿಕನ್ನಡ ವಾರ್ತೆ
ಪಣಜಿ: ಪ್ರಸಕ್ತ ವರ್ಷ ಗೋವಾ ರಾಜ್ಯಾದ್ಯಂತ ಹೆಚ್ಚಿನ ಮಳೆಯಾಗಿದೆ. ಇದರಿಂದಾಗಿ ಕೃಷಿ ಕ್ಷೇತ್ರದ ಮೇಲೆ ಭಾರಿ ಪರಿಣಾಮವುಂಟಾಗಿದೆ. ಅದರಲ್ಲೂ ಬಹುಮುಖ್ಯವಾಗಿ ಗೋವಾದಲ್ಲಿ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋವಾದಲ್ಲಿ ಸುರಿದ ಹೆಚ್ಚಿನ ಮಳೆಗೆ ಶೇ 80 ರಷ್ಟು ಅಡಿಕೆ ಬೆಳೆ ಹಾನಿಗೊಳಗಾಗಿದ್ದು ಅಡಿಕೆ ಬೆಳೆಗಾರರು ಭಾರಿ ನಷ್ಠ ಅನುಭವಿಸುವಂತಾಗಿದೆ. ಸರ್ಕಾರವು ಅಡಿಕೆ ಬೆಳೆಗಾರರಿಗೆ ಕೂಡಲೇ ಆರ್ಥಿಹ ಸಹಾಯ ನೀಡಬೇಕು ಎಂಬ ಆಘ್ರಹ ಕೂಡ ವ್ಯಕ್ತವಾಗುತ್ತಿದೆ.
ಗೋವಾದ ಶಿರೋಡಾ ದಲ್ಲಿನ ಅಡಿಕೆ ಬೆಳೆಗಾರ ಜಿತೇಂದ್ರ ಭಟ್ ಮಾಹಿತಿ ನೀಡಿ- ನಮ್ಮ ತೋಟದಲ್ಲಿ ಶೇ 90 ರಷ್ಟು ಅಡಿಕೆ ಬೆಳೆಯುವ ಮುನ್ನವೇ ಕೆಳಕ್ಕೆ ಬಿದ್ದು ಹಾಳಾಗುತ್ತಿದೆ. ಎರಡು ಬಾರಿ ಔಷಧ ಸಿಂಪರಣೆ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಬೆಳೆಯುವ ಮುನ್ನವೇ ನೆಲಕ್ಕೆ ಬಿದ್ದ ಅಡಿಕೆ ಕೊಳೆತು ಹೋಗಿರುವುದರಿಂದ ಇದರಿಂದ ಯಾವ ಆದಾಯವೂ ಲಭಿಸುವುದಿಲ್ಲ ಎಂಬ ಬೇಸರ ವ್ಯಕ್ತಪಡಿಸಿದ್ದಾರೆ.
ಗೋವಾದ ಗ್ರಾಮೀಣ ಭಾಗದಲ್ಲಂತೂ ಪ್ರಸಕ್ತ ಬಾರಿ ಹೆಚ್ಚಿನ ಮಳೆಯಾಗಿದೆ. ಇದರಿಂದಾಗಿ ಅಡಿಕೆ ಮರದಿಂದ ಬೆಳೆಯದ ಅಡಿಕೆಯೇ ಬಿದ್ದು ಖಾಲಿ ಆಗಿದೆ. ಅಡಿಕೆ ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವವರು ಇದರಿಂದಾಗಿ ಭಾರಿ ನಷ್ಠ ಅನುಭವಿಸಿದ್ದು ಅಡಿಕೆ ಬೆಳೆಗಾರರು ದಿಕ್ಕುತೋಚದಂತಾಗಿದ್ದಾರೆ. ಅಡಿಕೆ ಬೆಳೆ ಉಳಿಸಿಕೊಳ್ಳಲು ಬೆಳೆಗಾರರು ಹಲವು ಬಾರಿ ಔಷದ ಸಿಂಪಡನೆ ಮಾಡಿ ಹೆಚ್ಚಿನ ಹಣ ಖರ್ಚು ಮಾಡಿದ್ದಾರೆ. ಸದ್ಯ ಅಡಿಕೆ ಬೆಳೆಗಾರರ ಸ್ಥಿತಿ ಹೇಗಿದೆಯೆಂದರೆ ಅಡಿಕೆ ಬೆಳೆ ಉಳಿಸಿಕೊಳ್ಳಲು ಔಷಧಿ ಸಿಂಪಡಿಸಲು ಮಾಡಿದ ಖರ್ಚು ಕೂಡ ಉತ್ಪಾದನೆಯಿಂದ ಬರಲು ಸಾಧ್ಯವಿಲ್ಲ ಎಂಬಂತಾಗಿದೆ. ಇದರಿಂದಾಗಿ ಸರ್ಕಾರವು ಕೂಡಲೆ ಎಚ್ಚೆತ್ತು ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರಿಗೆ ಆರ್ಥಿಕ ಸಹಾಯ ನೀಡಬೇಕೆಂಬ ಆಘ್ರಹ ವ್ಯಕ್ತವಾಗಿದೆ.
