ಸುದ್ಧಿಕನ್ನಡ ವಾರ್ತೆ
ಪಣಜಿ: ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದೇಶಿ ಮಹಿಳೆಯ ಮೇಲೆ ವೈದ್ಯನೋರ್ವ ಲೈಂಗಿಕ ಅತ್ಯಾಚಾರ ನಡೆಸಿದ ಭೀಕರ ಘಟನೆ ಓಲ್ಡಗೋವಾದ ಹೆಲ್ತ ವೇ ಆಸ್ಪತ್ರೆಯಲ್ಲಿ ನಡೆದಿದೆ. ಹೆಲ್ತ ವೇ ಆಸ್ಪತ್ರೆಯ ಡಿಎನ್ ಬಿ ವೈದ್ಯ ಈ ಕೃತ್ಯ ಎಸಗಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯು ಈ ವ್ಯದ್ಯನ ವಿರುದ್ಧ ಪೋಲಿಸ್ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ವೈದ್ಯನನ್ನು ಪೋಲಿಸರು ಬಂಧಿಸಿದ್ದಾರೆ. ಆಸ್ಪತ್ರೆಯು ಈ ವೈದ್ಯನನ್ನು ಸಸ್ಪೆಂಡ್ ಮಾಡಿದೆ.
ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ- ಓಲ್ಡಗೋವಾದ ಹೆಲ್ತವೇ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಸ್ಪ್ಯಾನಿಶ್ ಮಹಿಳೆಯೋರ್ವಳು ಚಿಕಿತ್ಸೆ ಪಡೆಯುತ್ತಿದ್ದಳು. ಡಿಎನ್ ಬಿ ವೈದ್ಯ ಈಕೆಯ ಮೇಲೆ ಅತ್ಯಾಚಾರ ವೆಸಗಿದ್ದಾನೆ. ಈ ಕುರಿತಂತೆ ಮಹಿಳೆಯು ಆಸ್ಪತ್ರೆಯ ಸಮೀತಿಯ ಬಳಿ ದೂರು ನೀಡಿದ ನಂತರ ಪೋಲಿಸರಿಗೆ ಮಾಹಿತಿ ನೀಡಲಾಗಿದೆ.
ಪೋಲಿಸರು ಈ ಘಟನೆಗೆ ಸಂಬಂಧಿಸಿದಂತೆ ಡಾ.ವ್ಹಿ.ದೋಶಿ ಎಂಬ ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಆಸ್ಪತ್ರೆಯ ಈ ವೈದ್ಯನನ್ನು ಕೂಡಲೇ ಸಸ್ಪೆಂಡ್ ಮಾಡಿದೆ.
ಈ ಘಟನೆಗೆ ಸಂಬಂಧಿಸಿದಂತೆ ಓಲ್ಡ ಗೋವಾ ಹೆಲ್ತವೇ ಆಸ್ಪತ್ರೆಯು ಸ್ಪಷ್ಠೀಕರಣ ನೀಡಿದ್ದು- ಆಸ್ಪತ್ರೆಯು ವಿದೇಶಿ ಮಹಿಳೆಯಿಂದ ಈ ಕುರಿತ ದೂರು ಬಂದ ನಂತರ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ವಿದೇಶಿ ಮಹಿಳೆಗೆ ಅಗತ್ಯ ಉಪಚಾರ ಸಹಕಾರ ನೀಡಲಾಗುತ್ತಿದೆ. ಚಿಕಿತ್ಸೆಗಾಗಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂಬ ಸ್ಪಷ್ಠೀಕರಣ ನೀಡಿದೆ.