ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದ ವ್ಯಾಘ್ರ ಸಂರಕ್ಷಿತ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ನಿರ್ಮಾಣ ಕಾಮಗಾರಿಗೆ ಸವೋಛ್ಛ ನ್ಯಾಯಾಲಯವು ನಿರ್ಬಂಧ ಹೇರಿದೆ. ಈ ಕುರಿತಂತೆ ಸಂಬಂಧಿತ ಎಲ್ಲ ಘಟಕಗಳೊಂದಿಗೆ ಚರ್ಚೆ ನಡೆಸಿ ಕೇಂದ್ರ ಸಮೀತಿಯು ಎರಡು ವಾರಗಳಲ್ಲಿ ವರದಿ ನೀಎಂದು ಸರ್ವೋಚ್ಛ ನ್ಯಾಯಾಲಯ ಸೂಚನೆ ನೀಡಿದೆ. ಗೋವಾದ ಮಹದಾಯಿ ಅಭಯಾರಣ್ಯದ ಕ್ಷೇತ್ರ ಹಾಗೂ ಪರಿಸರವನ್ನು ವ್ಯಾಘ್ರ ಸಂರಕ್ಷಿತ ಕ್ಷೇತ್ರ ಎಂದು ಅಧಿಸೂಚನೆ ಹೊರಡಿಸಬೇಕು ಎಂದು ಗೋವಾ ಫೌಂಡೇಶನ್ ವತಿಯಿಂದ ಮುಂಬಯಿ ಉಚ್ಛನ್ಯಾಯಾಲಯದ ಗೋವಾ ಪೀಠದಲ್ಲಿ ಅರ್ಜಿ ಸಲ್ಲಿಸಿತ್ತು.

ಉಚ್ಛ ನ್ಯಾಯಾಲಯವು 90 ದಿನಗಳಲ್ಲಿ ಈ ಕ್ಷೇತ್ರವನ್ನು ವ್ಯಾಘ್ರ ಸಂರಕ್ಷಿತ ಕ್ಷೇತ್ರ ಎಂದು ಅಧಿಸೂಚನೆಗೊಳಿಸುವ ಆದೇಶವನ್ನು ನೀಡಿತ್ತು. ಇದಕ್ಕೆ ಗೋವಾ ರಾಜ್ಯ ಸರ್ಕಾರ ಸರ್ವೋಚ್ಛ ನ್ಯಾಯಾಲಯ ಮೆಟ್ಟಿಲೇರಿತ್ತು. ಇದೀಗ ಈ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಕಯ ವ್ಯಾಘ್ರ ಸಂರಕ್ಷಿತ ಪ್ರದೇಶದಲ್ಲಿ ಯಾವುದೇ ನಿರ್ಮಾಣಕಾರ ಕೈಗೊಳ್ಳದಂತೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಗೋವಾ ಫೌಂಡೇಶನ್ ವತಿಯಿಂದ ಕೆವಿಯೆಟ್ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಮಹತ್ವಪೂರ್ಣ ಪ್ರಕರಣದಲ್ಲಿ ಇದೀಗ ಸರ್ವೋಚ್ಛ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಗೋವಾದ ಮಹದಾಯಿ ಅಭಯಾರಣ್ಯದ ಸರಹದ್ದಿನ ವ್ಯಾಘ್ರ ಸಂರಕ್ಷಿತ ಪ್ರದೇಶದಲ್ಲಿ ಯಾವುದೇ ಕಟ್ಟಡ ಅಥವಾ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳದಂತೆ ಸರ್ವೋಚ್ಛ ನ್ಯಾಯಾಲಯವು ನಿರ್ಬಂಧ ಹೇರಿ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಸಮಗ್ರ ಅಭ್ಯಾಸ ನಡೆಸಲು ನ್ಯಾಯಾಲಯವು ಕೇಂದ್ರೀಯ ಸಮೀತಿಗೆ ಸೂಚನೆ ನೀಡಿ ವರದಿ ಕೇಳಿದೆ. ಇದೀಗ ಇನ್ನೆರಡು ವಾರದಲ್ಲಿ ಸಮೀತಿಯು ತನ್ನ ವರದಿಯನ್ನು ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಈ ಸಮೀತಿಯು ಗೋವಾದ ಎಲ್ಲ ಪಕ್ಷಗಳ ಅಭಿಪ್ರಾಯ ಸಂಗ್ರಹಿಸಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ಮಂಡಿಸಬೇಕಿದೆ. ಸಮೀತಿಯು ಎಲ್ಲ ಮತ ಹಾಗೂ ಪಕ್ಷಗಳ ಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಸಾದರಪಡಿಸಲಿದೆ.

ಸರ್ವೋಚ್ಛ ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಇನ್ನು ಆರು ವಾರಗಳಲ್ಲಿ ಕೈಗೆತ್ತಿಕೊಳ್ಳಲಿದೆ. ಅಂದು ಸಮೀತಿಯ ವರದಿಯನ್ನು ಆದರಿಸಿ ನ್ಯಾಯಾಲಯವು ತನ್ನ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದೀಗ ಸರ್ವೋಚ್ಛ ನ್ಯಾಯಾಲಯವು ಹೊರಡಿಸಿದ ಆದೇಶದಿಂದ ಈಗಾಗಲೇ ವ್ಯಾಘ್ರ ಸಂರಕ್ಷಿತ ಪ್ರದೇಶದಲ್ಕಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಅಥವಾ ಯಾವುದೇ ಅಭಿವೃದ್ಧಿ ಕಾರ್ಯವನ್ನು ಸ್ಥಗಿತಗೊಳಿಸಬೇಕಾಗಿದೆ. ಪರಿಸರ ದೃಷ್ಠಿಯಿಂದ ಸರ್ವೊಚ್ಛ ನ್ಯಾಯಾಲಯದ ತೀರ್ಪು ಅತ್ಯಂತ ಮಹತ್ವದ್ದು ಎಂದೇ ಹೇಳಲಾಗುತ್ತಿದೆ.

 


The Supreme Court has imposed restrictions on any construction work within the tiger reserve of Goa state. The Supreme Court has instructed that the Central Committee will discuss with all the concerned units and submit a report within two weeks. A petition was filed by the Goa Foundation in the Goa Bench of the Bombay High Court that the territory and environment of Goa’s Mahadayi Sanctuary should be notified as a tiger protected area.