ಸುದ್ಧಿಕನ್ನಡ ವಾರ್ತೆ
ಪಣಜಿ:ಗೋವಾ-ಕರ್ನಾಟಕ ಸಂರ್ಕಿಸುವ ಅನಮೋಡ ಘಾಟ್ ರಸ್ತೆಯಲ್ಲಿ ಭಾರಿ ವಾಹನಗಳ ನಿಷೇಧ ತೆರುವುಗೊಳಿಸಿ ಮಡಗಾಂವ ಜಿಲ್ಲಾಧಿಕಾರಿಗಳು ಸಪ್ಟೆಂಬರ್ 15 ರಿಂದ ಎಲ್ಲ ವಾಹನಗಳ ಓಡಾಟಕ್ಕೆ ಅನಮೋಡ ಘಾಟ್ ರಸ್ತೆಯನ್ನು ಮುಕ್ತಗೊಳಿಸಿದ್ದಾರೆ. ಇದರಿಂದಾಗಿ ಜುಲೈ 2 ರಿಂದ ಭಾರಿ ವಾಹಯನಗಳ ಓಡಾಟ ಬಂದ್ ಆಗಿದ್ದ ಈ ರಸ್ತೆಯಲ್ಲಿ ಇದೀಗ ಎಲ್ಲ ವಾಹನಗಳ ಓಡಾಟಕ್ಕೆ ಅನುಮತಿ ಲಭಿಸಿದಂತಾಗಿದೆ.
ಗೋವಾ-ಕರ್ನಾಟಕ ಸಂಪರ್ತಿಸುವ ಅನಮೋಡ ಘಾಟ್ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದರಿಂದ ಜುಲೈ 4 ರಂದು ಮಡಗಾಂವ ನಿಲ್ಲಾಧಿಕಾರಿಗಳು ಅಗತ್ಯ ಸೇವೆಯನ್ನು ಹಿರತುಪಡಿಸಿ ಇತರ ಎಲ್ಲ ಭಾರಿ ವಾಹನಗಳ ಓಡಾಟಕ್ಕೆ ನಿಷೇಧ ಹೇರಿದ್ದರು. ಆದರೆ ಭೂಕುಸಿತ ಉಂಟಾಗಿದ್ದ ಸ್ಥಳದಲ್ಲಿ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ ಎಂದು ಗೋವಾ ಲೋಕೋಪಯೋಗಿ ಇಲಾಖೆಯು ಇನ್ನೂ ಎರಡು ತಿಂಗಳು ಈ ರಸ್ತೆಯಲ್ಲಿ ಭಾರಿ ವಾಹನಗಳ ಓಡಾಟ ಬಂದ್ ಮಾಡುವಂತೆ ಮನವಿ ಮಾಡಿತ್ತು. ಇದಕ್ಕೆ ವಿವಿಧ ಟ್ರಕ್ ಅಸೋಸಿಯೇಶನ್, ನಾಗರೀಕರು ಕೂಡ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಜಿಲ್ಲಾಧಿಕಾರಿಗಳು ಈ ಮಾರ್ಗದಲ್ಲಿ ಸಪ್ಟೆಂಬರ್ 15 ರಿಂದ ಭಾರಿ ವಾಹನಗಳ ಓಡಾಟಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ.
ಇನ್ನು ಒಂದು ವಾರದ ಅವಧಿಯಲ್ಲಿ ಭೂಕುಸಿತ ಉಂಟಾದ ಸ್ಥಳದಲ್ಲಿ ಸುರಕ್ಷತೆಯ ದೃಷ್ಠಿಯಿಂದ ಉಪಾಯಯೋಜನೆ ಮಾಡಿಕೊಂಡು ಭೂಕುಸಿತದ ಸ್ಥಳದಲ್ಲಿ ಏಕಮುಖವಾಗಿ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸುರಕ್ಷತೆಯ ದೃಷ್ಠಿಯಿಂದ ರಸ್ತೆಯ ಪಕ್ಕದಲ್ಲಿ ತಗಡಿನ್ ಶೀಟ್ ಗಳನ್ನು ನಿಲ್ಲಿಸುವುದು, ಘಾಟ್ ಮಾರ್ಗದಲ್ಲಿ ರಸ್ತೆಯ ಅಕ್ಕಪಕ್ಕವನ್ನು ಗಿಡಗಂಟಿಗಳನ್ನ ಕಡಿದು ಸ್ವಚ್ಛಗೊಳಿಸುವ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಳ್ಳಲಿದೆ.
ಭೂಕುಸಿತ ಉಂಟಾಗಿದ್ದ ಸ್ಥಳದಲ್ಲಿ ತಳಭಾಗದಿಂದ ತಡೆಗೋಡೆ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಳ್ಳಲಿದ್ದು, ಇನ್ನು ಮೂರು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
By lifting the ban on heavy vehicles on the Goa-Karnataka Anamoda Ghat road, the Madgaon District Collector has opened the Anamoda Ghat road for all vehicles from September 15. Due to this, it seems that all vehicles have been allowed to ply on this road, which was closed for heavy vehicles since July 2.