ಸುದ್ದಿ ಕನ್ನಡ ವಾರ್ತೆ
ಬೆಳಗಾವಿಯಿಂದ ಗೋವಾಕ್ಕೆ ಬರುತ್ತಿದ್ದ ಮಹಾರಾಷ್ಟ್ರ ನೋಂದಣಿಯ ಆಡಿ ಕಾರು ಚೋರ್ಲಾ ಘಾಟ್ ತಿರುವಿನಲ್ಲಿ ಪಲ್ಟಿ ಯಾದ ಘಟನೆ ನಡೆದಿದೆ.
ಅದೃಷ್ಟವಶಾತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಪ್ರಯಾಣಿಕರು ಪಾರಾಗಿದ್ದಾರೆ.
ಈ ಘಟನೆಯಿಂದಾಗಿ ಕೆಲಕಾಲ ಚೋರ್ಲಾ ಘಾಟ್ ನಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿತ್ತು. ರಸ್ತೆ ಬದಿಯ ಕಾಲುವಿಗೆ ಬಿದ್ದಿದ್ದ ಕಾರನ್ನು ಮೇಲಕ್ಕೆ ಎತ್ತಲು ಸ್ಥಳೀಯರು ಅರಸಹಾಸ ಪಟ್ಟರು. ಆದರೆ ಸಾಧ್ಯವಾಗಿಲ್ಲ. ನಂತರ ಕ್ರೇನ್ ಸಹಾಯದಿಂದ ಕಾರನ್ನು ಮೇಲೆತ್ತಲಾಗಿದೆ.