ಸುದ್ದಿಕನ್ನಡ ವಾರ್ತೆ
Belagavi/Goa: ಗೋವಾ-ಬೆಳಗಾವಿ ಸಂಪರ್ಕಿಸುವ ಚೋರ್ಲಾ ಘಾಟ್ ಮಾರ್ಗದಿಂದ ಮಹತ್ವದ ಸುದ್ದಿಯೊಂದು ಬಂದಿದ್ದು, ಮಲಪ್ರಭಾ ನದಿಗೆ ಕಟ್ಟಿದ್ದ ಸೇತುವೆ ಶನಿವಾರ ರಾತ್ರಿ ಭಾರಿ ಮಳೆಗೆ ಕೊಚ್ಚಿ ಹೋಗಿದೆ. ಈ ಘಟನೆಯ ನಂತರ ಈ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ವಾಹನ ಸವಾರರು ಬದಲಿ ಮಾರ್ಗದಿಂದ ಓಡಾಟ ನಡೆಸುವಂತೆ ಸೂಚಿಸಲಾಗಿದೆ.(The bridge built over the Malaprabha river was swept away by heavy rains on Saturday night).

ಮಲಪ್ರಭಾ ನದಿಗೆ ಹೊಸ ಸೇತುವೆಯ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ವಾಹನ ಸಂಚಾರಕ್ಕಾಗಿ ತಾತ್ಪೂರ್ತಿಕವಾಗಿ ಸೇತುವೆಯೊಂದನ್ನು ನಿರ್ಮಾಣ ಮಾಡಲಾಗಿತ್ತು. ರಾತ್ರಿ ಸುರಿದ ಭಾರಿ ಮಳೆಗೆ ಈ ಸೇತುವೆ ಕೊಚ್ಚಿಹೋಗಿದೆ. ಸೇತುವೆಯ ಒಂದು ಭಾಗದಲ್ಲಿ ಭಾರಿ ಪ್ರಮಾಣದ ಹೊಂಡ ನಿರ್ಮಾಣವಾಗಿದೆ. ಇದರಿಂದಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಸಂಚಾರ ಬದಲಾವಣೆ…
ಈ ಘಟನೆಯಿಂದಾಗಿ ಬೆಳಗಾವಿಯಿಂದ ಗೋವಾಕ್ಕೆ ತೆರಳುವ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ವಾಹನಗಳನ್ನು ಜಾಂಬೋಟಿ-ಖಾನಾಪುರ ಮಾರ್ಗದಿಂದ ಬಿಡಲಾಗುತ್ತಿದೆ. ಗೋವಾ-ಬೆಳಗಾವಿ ಮಾರ್ಗದಲ್ಲಿ ಓಡಾಟ ನಡೆಸುವವರು ಈ ಮಾರ್ಗವನ್ನು ಬಳಸಿಕೊಳ್ಳಬೇಕು ಸೂಚಿಸಲಾಗಿದೆ.
ಇಲ್ಲಿ ಹೊಸ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವವರೆಗೆ ಅಥವಾ ತಾತ್ಪೂರ್ತಿಕ ಸೇತುವೆ ನಿರ್ಮಾಣವಾಗುವ ವರೆಗೂ ವಾಹನ ಸಚಾರರು ಬದಲಿ ಮಾರ್ಗವನ್ನು ಬಳಸಿಕೊಳ್ಳಬೇಕೆಂದು ಸೂಚಿಸಲಾಗಿದೆ.