ಸುದ್ದಿ ಕನ್ನಡ ವಾರ್ತೆ
ಸಂಘಟನೆಗೊಂದು ಹೊಸ ಆಯಾಮವನ್ನು, ಹೊಸ ದೃಷ್ಟಿಕೋನವನ್ನು ನೀಡುವ ಉದ್ದೇಶದಿಂದ ಶ್ರೀ ಅಖಿಲ ಹವ್ಯಕ ಮಹಾಸಭೆಯು ದಿನಾಂಕ 27, 28, 29 ಡಿಸೆಂಬರ್ 2024 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ *ತೃತೀಯ ವಿಶ್ವ ಹವ್ಯಕ ಸಮ್ಮೇಳನ* ‘ ವನ್ನು ಹಮ್ಮಿಕೊಂಡಿದೆ.
ಈ ಅದ್ಧೂರಿ ಸಮಾರಂಭದ ಪೂರ್ವಭಾವಿಯಾಗಿ *ನವೆಂಬರ್ 17, ಭಾನುವಾರದಂದು ಸಂಜೆ 7-00 ಗಂಟೆಗೆ ಸರಿಯಾಗಿ ಮಡಗಾಂನ ಮುಗಾಳಿಯಲ್ಲಿ ಶ್ರೀಮತಿ ರೇಖಾ ಮತ್ತು ಎಮ್.ಕೆ.ಹೆಗಡೆ ಇವರ ಮನೆಯಲ್ಲಿ ಅಪರೂಪದ ಸಭೆಯನ್ನು ಕರೆಯಲಾಗಿದೆ.
ಮಹಾಸಭೆಯ ಕ್ರಿಯಾಶೀಲ ಅಧ್ಯಕ್ಷರಾದ ಡಾ. ಗಿರಿಧರ ಕಜೆಯವರೊಂದಿಗೆ ಸಂಜೆಯ ತಂಪಾದ ವಾತಾವರಣದಲ್ಲಿ ಕುಳಿತು ವಿಶ್ವ ಹವ್ಯಕ ಸಮ್ಮೇಳನದ ಕುರಿತಾಗಿ ಮುಕ್ತವಾಗಿ ಮಾತನಾಡುವ ಅವಕಾಶವನ್ನು ಪ್ರತಿಯೊಬ್ಬರಿಗೂ ಕಲ್ಪಿಸಲಾಗಿದೆ. ಈ ಸದವಕಾಶವನ್ನು ಕಳೆದುಕೊಳ್ಳದೆ, ಸುತ್ತ ಮುತ್ತಲಿನ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಲಹೆ ಸಹಕಾರಗಳನ್ನು ನೀಡುವುದರ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಬೇಕೆಂದು ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇವೆ🙏.
ಪ್ರಕಟಣೆ:
ಪ್ರಧಾನ ಕಾರ್ಯದರ್ಶಿ
ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ)