Suddikannada news
Goa : Ruling BJP state president Sadananda Shet Thanawade has hinted at a reshuffle of the Goa state cabinet in the current New Year. Apart from this, there is a possibility that the election of the new regional president will also take place at the end of this month.
BJP state president Tanawade, state general secretary Narendra Savaikar and former Rajya Sabha member Vinay Tendulkar met Chief Minister Pramod Sawant at his official residence in Altino to discuss the cabinet formation.
Talking to Reporter, Tanavade-Maharashtra assembly elections, the process of reshuffle of the cabinet was stalled. Now in the new year the cabinet may be restructured. Sadananda Tanavade informed that now the emphasis is on party organization and strengthening.
ಸುದ್ಧಿಕನ್ನಡ ವಾರ್ತೆ
Goa: ಪ್ರಸಕ್ತ ಹೊಸ ವರ್ಷದಲ್ಲಿ ಗೋವಾ ರಾಜ್ಯ ಸಚಿವ ಸಂಪುಟ ಪುನರ್ರಚನೆಯಾಗುವ ಬಗ್ಗೆ ಆಡಳಿತಾರೂಢ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತಾನಾವಡೆ ಸುಳಿವು ನೀಡಿದ್ದಾರೆ.
ಇಷ್ಟೇ ಅಲ್ಲದೆಯೇ ಪ್ರಸಕ್ತ ತಿಂಗಳಾಂತ್ಯಕ್ಕೆ ಹೊಸ ಪ್ರದೇಶಾಧ್ಯಕ್ಷರ ಆಯ್ಕೆ ಕೂಡ ನಡೆಯುವ ಸಾಧ್ಯತೆಯಿದೆ ಎಂದು
ಸಚಿವ ಸಂಪುಟ ಪುರ್ರಚನೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ತಾನಾವಡೆ ರವರು ರಾಜ್ಯ ಪ್ರಧಾನ ಕಾರ್ಯದರ್ಶಿ ನರೇಂದ್ರ ಸಾವೈಕರ್ ಮತ್ತು ಮಾಜಿ ರಾಜ್ಯಸಭಾ ಸದಸ್ಯ ವಿನಯ್ ತೆಂಡುಲ್ಕರ್ ರವರು ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರನ್ನು ಅಲ್ತಿನೊದಲ್ಲಿನ ಅವರ ಅಧೀಕೃತ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ತಾನಾವಡೆ- ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನರ್ರಚನೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈಗ ಹೊಸ ವರ್ಷದಲ್ಲಿ ಸಂಪುಟ ಪುನರ್ರಚನೆ ಆಗಬಹುದು. ಈಗ ಪಕ್ಷ ಸಂಘಟನೆ ಮತ್ತು ಬಲವರ್ಧನೆಗೆ ಒತ್ತು ನೀಡಲಾಗಿದೆ ಎಂದು ಸದಾನಂದ ತಾನಾವಡೆ ಮಾಹಿತಿ ನೀಡಿದರು.