ಸುದ್ಧಿಕನ್ನಡ ವಾರ್ತೆ
Goa: ಮಹದಾಯಿ ರಕ್ಷಣೆಗಾಗಿ ಕರ್ನಾಟಕದ ವಿರೋಧವಾಗಿ ಬಿಜೆಪಿ ನಾಯಕ ಹಾಗೂ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅಸಮರ್ಥವಾಗಿದ್ದಾರೆ. ಇದರಿಂದಾಗಿ ನೆರೆಯ ರಾಜ್ಯ ಕರ್ನಾಟಕವು ಮಹದಾಯಿ ನದಿ ನೀರು ತಿರುಗಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ ಎಂದು ಗೋವಾ ವಿರೋಧ ಪಕ್ಷದ ನಾಯಕ ಯೂರಿ ಅಲೆಮಾಂವ ಠೀಕಾ ಪ್ರಹಾರ ನಡೆಸಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ ವತಿಯಿಂದ ಖಾನಾಪುರದ ನೆರಸೆ ಊರಿನಲ್ಲಿ ಕಾಮಾಗಾರಿ ಕೈಗೊಂಡಿದೆ. ಈ ಕುರಿತಂತೆ ಗೋವಾ ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್ ನಿದರ್ಶನಕ್ಕೆ ತಂದಿದ್ದಾರೆ, ಆದರೆ ಗೋವಾ ಸರ್ಕಾರಕ್ಕೆ ಮಾತ್ರ ಈ ವಿಷಯದಲ್ಲಿ ಲಕ್ಷ್ಯ ವಹಿಸುತ್ತಿಲ್ಲ ನಿಷ್ಕಾಳಜಿ ತೋರುತ್ತಿದೆ ಎಂದು ಯೂರಿ ಅಲೆಮಾಂವ ಆರೋಪಿಸಿದರು.
ಕರ್ನಾಟಕದ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಗೋವಾದ ಪರಿಸರ ಪ್ರೇಮಿಗಳು ಚಿಂತೆ ವ್ಯಕ್ತಪಡಿಸಿದ್ದಾರೆ. ಆದರೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹಾಗೂ ಗೋವಾ ರಾಜ್ಯ ಸರ್ಕಾರಕ್ಕೆ ಯಾವುದೇ ಜವಾನ್ದಾರಿಯಿಲ್ಲ, ಕರ್ನಾಟಕವು ಹೇಗೆ ಬೇಕೋ ಹಾಗೆ ಕಾಮಗಾರಿ ನಡೆಸಿಕೊಳ್ಳಲು ಗೋವಾ ಸರ್ಕಾರವು ಸ್ವತಂತ್ರವಾಗಿ ಬಿಟ್ಟಿದೆ ಎಂದು ಯೂರಿ ಅಲೆಮಾಂವ ಆರೋಪಿಸಿದರು. ಕರ್ನಾಟಕವು ಮಹದಾಯಿ ನದಿ ನೀರು ತಿರುಗಿಸಿಕೊಳ್ಳಲು ಯಾವುದೇ ಅಧೀಕೃತ ಪರವಾನಗಿಯಿಲ್ಲ. ಇದಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಪರವಾನಗುಯಿಲ್ಲ. ಆದರೂ ಕರ್ನಾಟಕ ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸಿದೆ ಎಂದು ಯೂರಿ ಅಲೆಮಾಂವ ಆರೋಪಿಸಿದರು.
ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಯಾವುದೇ ಹೆದರುವ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ಮಹದಾಯಿ ರಕ್ಷಿಸಿಕೊಳ್ಳಲು ಮುಂದಾಗುವ ಅಗತ್ಯವಿದೆ, ಈ ಸ್ಥಿತಿಗೆ ಸಚಿವ ಸುಭಾಷ ಶಿರೋಡಕರ್ ಜವಾಬ್ದಾರಿಯಾಗಿದ್ದಾರೆ. ಬಿಜೆಪಿಯು ರಾಜಕೀಯ ಲಾಭಕ್ಕಾಗಿ ಮಹದಾಯಿ ನದಿಯನ್ನು ಕರ್ನಾಟಕಕ್ಕೆ ಮಾರಾಟ ಮಾಡಿದ್ದಾರೆ. ಮುಖ್ಯಮಂತ್ರಿ ಸಾವಂತ್ ರವರು ಮಹದಾಯಿಗೆ ಸಂಬಂಧಿಸಿದಂತೆ ಗೋವಾ ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಯೂರಿ ಅಲೆಮಾಂವ ಆರೋಪಿಸಿದರು.