ಸುದ್ದಿ ಕನ್ನಡ ವಾರ್ತೆ

ಗೋವಾದ ಮಡಗಾವ್ ನಲ್ಲಿ ಫೆಬ್ರುವರಿ 1 ಭಾನುವಾರ  ನಡೆದ ಹವ್ಯಕ ವಲಯೋತ್ಸವದಲ್ಲಿ ನಿವೃತ್ತ ಪ್ರಾಚಾರ್ಯ ಶ್ರೀ ಪರಮೇಶ್ವರ ಭಟ್ ಹಾಗೂ ಅವರ ಪತ್ನಿ ಶ್ರೀಮತಿ ಸುಚೇತಾ ಭಟ್ಟ ಅವರನ್ನು ಸನ್ಮಾನಿಸಲಾಯಿತು.

ಹವ್ಯಕ ಮಹಾಮಂಡಲದ ಪ್ರಾಂತ ಉಪಾಧ್ಯಕ್ಷ ಶ್ರೀ ಜಿ ಎಸ್ ಹೆಗಡೆ, ಕುಮಟಾ ಮಂಡಲದ ಅಧ್ಯಕ್ಷ ಶ್ರೀ ಎಸ್ ವಿ ಹೆಗಡೆ ಭದ್ರನ್ ಹಾಗೂ ಮಾತೃ ಪ್ರಧಾನೆ ಶ್ರೀಮತಿ ಲಲಿತಾ ಹೆಗಡೆ ಗೋವಾ ವಲಯದ ಅಧ್ಯಕ್ಷ ಶ್ರೀ ಮಹಾಬಲ ಭಟ್ಟ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.