ಸುದ್ಧಿಕನ್ನಡ ವಾರ್ತೆ
ಗೋವಾ:ಗೋವಾದ ಮಾರ್ಶೆಲ್ ನಲ್ಲಿ ನೆಲೆಸಿರುವ ಯಲ್ಲಾಪುರದ ಮಾಗೋಡು ಮೂಲದ ಹಿರಿಯ ವೈದಿಕರಾದ ಶ್ರೀ ನಾರಾಯಣ ಭಟ್ ಹಾಗೂ ಶ್ರೀಮತಿ ಸರಸ್ವತಿ ಭಟ್ ರವರ ದ್ವಿತೀಯ ಪುತ್ರ ಶ್ರೀ ಗಣೇಶ್ ರವರ ವಿವಾಹವು ಚಿ.ಸೌ.ಶ್ರೇಯಾ (ಶ್ರೀ ಶಂಕರನಾರಾಯಣ ಹಾಗೂ ಶ್ರೀಮತಿ ಉಷಾ ರವರ ಪ್ರಥಮ ಪುತ್ರಿ) ರವರೊಂದಿಗೆ ಯಲ್ಲಾಪುರದ ಕಾರ್ಮಿಕ ಸಭಾಭವನದಲ್ಲಿ ಫೆಬ್ರುವರಿ 22 ರಂದು ಭಾನುವಾರ ಅದ್ದೂರಿಯಾಗಿ ನೆರವೇರಿತು.
ಈ ವಿವಾಹ ಸಮಾರಂಭಕ್ಕೆ ಬಂಧುಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ವಿಶೇಷವಾಗಿ ಗೋವಾದಲ್ಲಿ ನೆಲೆಸಿರುವ ಉತ್ತರಕನ್ನಡ ಮೂಲದ ವೈದಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಶ್ರೀ ನಾರಾಯಣ ಭಟ್ ರವರ ದ್ವಿತೀಯ ಪುತ್ರ ಗಣೇಶ ರವರು ಸದ್ಯ ಲಂಡನ್ ನಲ್ಲಿ ಕಂಪನಿಯೊಂದರಲ್ಲಿ ಉನ್ನತ ಹುದ್ಧೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ನೂತನ ವಧು-ವರರಿಗೆ ಸುದ್ಧಿಕನ್ನಡ ವಾಹಿನಿಯ ಬಳಗದಿಂದ ಹಾರ್ದಿಕ ಅಭಿನಂದನೆಗಳು.
