ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಕನ್ನಡ ಸಮಾಜ ಪಣಜಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಮಾಣಿಕ್ಯ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಅಂಗವಾಗಿ ಕನ್ನಡ ಕವಿಗಳ ದಿನದರ್ಶಿಕೆಯನ್ನು ಸಿದ್ಧಪಡಿಸಿದೆ. ಈ ಕನ್ನಡ ಕವಿಗಳ ದಿನದರ್ಶಿಕೆಯನ್ನು ಗೋವಾ ರಾಜ್ಯಪಾಲರಾದ ಪಶುಪತಿ ಅಶೋಕ ಗಜಪತಿ ರಾಜು ರವರು ಗೋವಾ ರಾಜಭವನದಲ್ಲಿ ಬುಧವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್, ಉಪಾಧ್ಯಕ್ಷ ಪ್ರಶಾಂತ್ ಜೈನ್, ಕಾರ್ಯದರ್ಶಿ ಶ್ರೀಕಾಂತ ಲೋಣಿ, ಬಿಜೆಪಿ ಗೋವಾ ಕರ್ನಾಟಕ ಸೆಲ್ ಕನ್ವೀನರ್ ಮುರಳಿ ಮೋಹನ್ ಶೆಟ್ಟಿ, ಗೋವಾ ಕನ್ನಡ ಸಮಾಜದ ಕಾರ್ಯಕಾರಿ ಸಮೀತಿಯ ಸದಸ್ಯರಾದ ಮಂಜು ದೊಡ್ಮನಿ ಉಪಸ್ಥಿತರಿದ್ದರು.
ಗೋವಾ ಕನ್ನಡ ಸಮಾಜ ಸಿದ್ಧಪಡಿಸಿರುವ ಕನ್ನಡ ಕವಿಗಳ ದಿನದರ್ಶಿಕೆಯಲ್ಲಿ ಕವಿಗಳು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ಆಯಾ ಕವಿಗಳ ಸಂಪೂರ್ಣ ವಿವರ ಮುದ್ರಿಸಲಾಗಿದೆ. ದಿದರ್ಶಿಕೆಯ ಪ್ರತಿ ತಿಂಗಳ ಪುಟದಲ್ಲಿ ಇಬ್ಬರು ಕವಿಗಳ ವಿವರವನ್ನು ಮುದ್ರಿಸಲಾಗಿದೆ.
