ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜಧಾನಿ ಪಣಜಿಯ ಕಾಂಪಾಲ ಮೈದಾನದಲ್ಲಿ ಜನವರಿ 17 ಮತ್ತು 18 ರಂದು ಹವ್ಯಕ ಬ್ರಾಹ್ಮಣ ಸಂಘ ಗೋವಾ ಪ್ರಸ್ತುತಪಡಿಸುವ “ಬ್ರಾಹ್ಮಣ ಪ್ರೀಮಿಯರ್ ಲೀಗ್” ಹಾರ್ಡ ಟೆನ್ನಿಸ್ ಬಾಲ್ ಟೂರ್ನಾಮೆಂಟ್ ಆಯೋಜಿಸಲಾಗಿದೆ.
ವಿಜೇತರಿಗೆ ಮೊದಲ ಬಗಹುಮಾನ 21000 , ದ್ವಿತೀಯ ಬಹುಮಾನ-11000, ಸೆಮಿ ಫೈನಲಿಸ್ಟ ಬಹುಮಾನ -ತಲಾ 5000 ರೂ ನೀಡಲಾಗುವುದು. ಇಷ್ಟೇ ಅಲ್ಲದೆಯೇ ಬೆಸ್ಟ ಬ್ಯಾಟ್ಸಮೆನ್, ಬೆಸ್ಟ ಬೋಲರ್, ಮ್ಯಾನ್ ಆಫ್ ದ ಸಿರಿಸ್, ಮ್ಯಾನ್ ಆಫ್ ದ ಮ್ಯಾಚ್ ಬಹುಮಾನವನ್ನೂ ನೀಡಲಾಗುತ್ತದೆ. ಈ ಟೂರ್ನಮೆಂಟ್ ಗೆ 3000 ರೂ ಎಂಟ್ರಿ ಫಿ ನಿಗಧಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
