ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯ ಜಿಲ್ಲಾ ಪಂಚಾಯತ ಚುನಾವಣೆ ಡಿಸೆಂಬರ್ 20 ರಂದು ಗೋವಾ ರಾಜ್ಯದ 50 ಜಿಲ್ಲಾ ಪಂಚಾಯತ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 1 ರಿಂದ 9 ರವರೆಗೆ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ಡಿಸೆಂಬರ್ 10 ರಂದು ಬುಧವಾರ ಪೂರ್ಣಗೊಂಡಿದೆ. ಉತ್ತರಗೋವಾದಲ್ಲಿ 1 ದಕ್ಷಿಣ ಗೋವಾದಲ್ಲಿ 6 ನಾಮಪತ್ರಗಳು ಅಸ್ವೀಕೃತವಾಗಿದೆ. ಉತ್ತರಗೋವಾದಲ್ಲಿ 158 ಹಾಗೂ ದಕ್ಷಿಣ ಗೋವಾದಲ್ಲಿ 162 ನಾಮಪತ್ರಗಳು ಸ್ವೀಕೃತವಾಗಿದೆ. ನಾಮಪತ್ರ ಹಿಂಪಡೆಯಲು ಗುರುವಾರ ಮಧ್ಯಾನ್ಹ 2 ಗಂಟೆಯವರೆಗೆ ಕಾಲಾವಕಾಶವಿದೆ.
ಡಿಸೆಂಬರ್ 10 ರಂದು ಬೆಳಿಗ್ಗೆ 10 ಗಂಟೆಯಿಂದ ನಾಮಪತ್ರ ಪರಿಶೀಲನೆ ನಡೆಯಿತು. ಡಿಸೆಂಬರ್ 11 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾನ್ಹ 2 ಗಂಟೆಯವರೆಗೆ ಅಭ್ಯರ್ಥಿಗಳು ನಾಮಪತ್ರವನ್ನು ಹಿಂಪಡೆಯಬಹುದಾಗಿದೆ. ಗುರುವಾರ ಮಧ್ಯಾನ್ಹ 2 ಗಂಟೆಯ ನಂತರ ಅಂತಿಮ ಪಟ್ಟಿಯನ್ನು ಪ್ರಕಟಗೊಳ್ಳಲಿದೆ. ಡಿಸೆಂಬರ್ 20 ರಂದು ಬೆಳಿಗ್ಗೆ 8 ರಿಂದ ಮತದಾನ ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ 22 ರಂದು ಫಲಿತಾಂಶ ಪ್ರಕಟವಾಗಲಿದೆ.
