ಸುದ್ಧಿಕನ್ನಡ ವಾರ್ತೆ
ಕಾಣಕೋಣ: ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಮಠವು ಎರಡನೇಯ ಅಯೋಧ್ಯೆಯಾಗಿದೆ. ಇನ್ನು ಮುಂದೆ ಶ್ರೀರಾಮನ ದರ್ಶನ ಪಡೆಯಲು ಅಯೋಧ್ಯೆಗೆ ಹೋಗಬೇಕೆಂದಿಲ್ಲ ಎಂದು ಚಿತ್ರಾಪುರ ಮಠಾಧೀಶ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಮಹಾಸ್ವಾಮೀಜಿ ನುಡಿದರು,.
ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಮಠದ 550 ನೇಯ ವರ್ಧಂತಿ ಉತ್ಸವದಲ್ಲಿ ಆಯೋಜಿಸಿದ್ದ ಧರ್ಮಸಭೆಯನ್ನುದ್ದೇಶಿಸಿ ಚಿತ್ರಾಪುರ ಮಠದ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು. ಗುರುವಿನ ಮೇಲಿನ ಭಕ್ತಿಯಿಂದ ಮಾತ್ರ ಸಮೃದ್ಧ ಜೀವನ ಸೃಷ್ಠಿಯಾಗುತ್ತದೆ. ಶುದ್ಧ ಮನೋಭಾವದಿಂದ ಗುರುವಿಗೆ ನಿಮ್ಮನ್ನು ಸಮರ್ಪಿಸಿಕೊಳ್ಳಿ. ಇಡೀ ಸಮಾಜವನ್ನು ಉತ್ತಮ ಮಾರ್ಗದಲ್ಲಿ ಮುನ್ನಡೆಸಿಕೊಂಡು ಹೋಗುವ ಮೂಲಕ ಪರ್ತಗಾಳಿ ಮಠದ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ರವರು ಇಡೀ ಸಮಾಜಕ್ಕೆ ವಿಭಿನ್ನ ದಿಕ್ಕನ್ನು ನೀಡಿದ್ದಾರೆ. ಪರ್ತಗಾಳಿ ಮಠದ ಶ್ರೀಗಳು ತಮ್ಮ ಮಾರ್ಗದರ್ಶನದ ಮೂಲಕ ಮಠವನ್ನು ಪರಿವರ್ತಿಸಿದ್ದಾರೆ. ಸಾರಸ್ವತ ಸಮುದಾಯದ ಸಮೃದ್ಧಿಗೂ ಇದು ಕಾರಣವಾಗಿದೆ. ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದ ಸಭ್ಯಾಸ ಮಾಡಿದರೆ ದೇವರು ಸಂತುಷ್ಠನಾಗುತ್ತಾನೆ. ಜೀವನದಲ್ಲಿ ಕೇವಲ ಹಣವೇ ಸಂತೋಷವಲ್ಲ, ಸಂತೋಷ ಶಾಂತಿಯುತ ಮತ್ತು ಸುರಕ್ಷಿತ ಜೀವನಕ್ಕಾಗಿ ಗುರುವಿನಲ್ಲಿ ನಂಬಿಕೆ ಮತ್ತು ಭಕ್ತಿಯನ್ನು ಹೊಂದಿರಿ ಎಂದು ಚಿತ್ರಾಪುರ ಮಠದ ಶ್ರೀಗಳು ನುಡಿದರು.
ಈ ಸಂದರ್ಭದಲ್ಲಿ ದಿವ್ಯಸಾನಿಧ್ಯ ವಹಿಸಿದ್ದ ಶ್ರೀಗೋಕರ್ಣ ಪರ್ತಗಾಳಿ ಮಠದ ಪೀಠಾಧಿಪತಿಗಳಾದ ರ್ಶರೀ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ರವರು ಆಶೀರ್ವಚನ ನೀಡಿ- ಚಿತ್ರಾಪುರ ಮಠದ ಶಿಷ್ಯರು ನಮ್ಮ ಮಠ ಆರಂಭಿಸಿದ ಶ್ರೀರಾಮನಾಮ ಜಪ ಮತ್ತು ಇತರ ಪ್ರಮುಖ ಸಂದರ್ಭಗಳಲ್ಲಿ ತಮ್ಮ ಅಮೂಲ್ಯವಾದ ಸಹಕಾರವನ್ನು ನೀಡಿದ್ದಾರೆ. ಇದರ ಹಿಂದಿನ ಪ್ರೇರಣೆಯೇ ಚಿತ್ರಾಪುರ ಮಠದ ಸ್ವಾಮೀಜಿ ರವರೇ ಆಗಿದ್ದಾರೆ ಎಂದರು.
ಚಿತ್ರಾಪುರ ಮಠವು ಶ್ರೀಮಠದ ನವೀಕರಣ ಮತ್ತು ಇತರ ಕೆಲಸಗಳಿಗೆ ಕೊಡುಗೆ ನೀಡಿದ್ದನ್ನು ಪರ್ತಗಾಳಿ ಮಠದ ಶ್ರೀಗಳು ನೆನಪಿಸಿಕೊಂಡರು.
ಶ್ರೀಗೋಕರ್ಣ ಪರ್ತಗಾಳಿ ಮಠದ ನಿರ್ಮಾಣಕ್ಕೆ ಕೊಡುಗೆ ನೀಡಿದ ವಾಸ್ತು ತಜ್ಞರು,ಎಂಜಿನೀಯರ್ ಗಳು, ಮತ್ತು ಚಿತ್ರಕಾರರಿಗೆ ಚಿತ್ರಾಪುರ ಮಠದ ಶ್ರೀಗಳು ಮತ್ತು ಪರ್ತಗಾಳಿ ಮಠದ ಶ್ರೀಗಳು ಶಾಲು ಮತ್ತು ಸ್ಮರಣಿಕೆ ನೀಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಪರ್ತಗಾಳಿ ಮಠದ ಕೇಂದ್ರ ಮಠ ಸಮೀತಿಯ ಅಧ್ಯಕ್ಷ ಶ್ರೀನಿವಾಸ್ ದೆಂಪೊ, ಉಪಾಧ್ಯಕ್ಷ ಶಿವಾನಂದ ಸಾಳಗಾಂವಕರ್, ಆರ್.ಆರ್.ಕಾಮತ್, ಜಗನ್ನಾಥ ಶೇಣ್ವೆ,ಏಕನಾಥ ಪ್ರಭು, ಸುಭಾಷ ಕಾಮತ್, ಮುಕುಂದ ಕಾಮತ್, ಜಗದೀಶ್ ಪೈ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಶ್ರೀನಿವಾಸ್ ದೆಂಪೊ ಮತ್ತು ಶಿವಾನಂದ ಸಾಳಗಾಂವಕರ್ ರವರು ಪರ್ತಗಾಳಿ ಮಠದ ಶ್ರೀಗಳ ಹಾಗೂ ಚಿತ್ರಾಪುರ ಮಠದ ಶ್ರೀಗಳ ಪಾದಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್ ದೆಂಪೊ ಸ್ವಾಗತ ಭಾಷಣ ಮಾಡಿ- ನಮ್ಮ ಮಠ ಶ್ರೀಮದ್ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ರವರು ಕಠಿಣ ಪರಿಶೃಮ, ಗುರಿ ಹೊಂದಿದ ಪಾಂಡಿತ್ಯ ಪೂರ್ಣ ಕರ್ಮಯೋಗಿಗಳು. ಅವರ ಪ್ರೇರಣೆಯಿಂದಲೇ ಇವೆಲ್ಲವೂ ಸಾಧ್ಯವಾಗಿದೆ. ಇಲ್ಲಿಯವರೆಗೂ ಸುಮಾರು ಒಂದೂವರೆಯಿಂದ ಎರಡು ಲಕ್ಷ ಭಕ್ತಾದಿಗಳು ವರ್ಧಂತಿ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಮಠದ ಪ್ರಸಿದ್ಧಿಯು ಜಗತ್ತಿನ ಮೂಲೆ ಮೂಲೆಯನ್ನು ತಲುಪಿದೆ,ಮಠದ ವೈಭವ ಹೆಚ್ಚಾಗಿದೆ. ಕೋಟ್ಯಂತರ ಜನರು ಶ್ರೀರಾಮನ ಹೆಸರನ್ನು ಜಪಿಸಿರುವುದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಾಗಿದೆ ಎಂದು ಮಠದ ಅಧ್ಯಕ್ಷ ಶ್ರೀನಿವಾಸ್ ದೆಂಪೊ ನುಡಿದರು.
ಈ ಕಾರ್ಯಕ್ರಮದಲ್ಲಿ ವೇದಮೂರ್ತಿ ಅನಂತ ಭಟ್, ಗಿರೀಶ್ ಭಟ್, ಚಂದ್ರಹಾಸ ಭಟ್, ವಿಷ್ಣುದಾಸ ಭಟ್, ಗುರುದಾಸ ಆಚಾರ್ಯ, ಅನೀಲ್ ಭಟ್, ನರಸಿಂಹ ಭಟ್ ವೇದಘೋಷ ನಡೆಸಿದರು.
ಈ ಸಂದರ್ಭದಲ್ಲಿ ಜಗನ್ನಾಥ ಶೇಣ್ವಿ, ಸಂದೀಪ ಶಿಕ್ರೆ, ಅಭಯ ಕುಂಕಳ್ಯೇಕರ್, ಅರುಣ ನಾಯಕ್, ವೆಂಕಟೇಶ್ ಪೈ, ರಕ್ಷಾ ಬಾಳಿಗ, ಆಕಾಶ ನಾಯಕ್, ರವಿ ಗುನಗಾ, ದಿನೇಶ್ ಕಾಮತ್, ದಿನೇಶ್ ನಾಯಕ್, ದತ್ತಪ್ರಸಾದ ಪ್ರಿಯೋಳಕರ್, ದಿನೇಶ್ ಪೈ,ಸದಾನಂದ ನಾಯಕ್, ಮುಕುಂದ ಕಾಮತ್, ಯೋಗೇಶ್ ಕಾಮತ್, ಸುಭಾಷ್ ಭಟ್, ಮುಕೇಶ್ ಭಟ್, ಪ್ರದೀಪ ಭಟ್, ರಘುವೀರ , ಉಮೇಶ್ ನಾಯಕ್, ಮಹೇಶ್ ನಾಯಕ್ ರವರಿಗೆ ಪರ್ತಗಾಳಿ ಮಠದ ಶ್ರೀಗಳು ಶಾಲು ಹೊದಿಸಿ ಸ್ಮರಣಿಕೆ ನೀಡಿ ಆಶೀರ್ವಧಿಸಿದರು. ಅನೀಲ್ ಪೈ ರವರು ಕಾರ್ಯಕ್ರಮ ನಿರೂಪಿಸಿದರು.
