ಸುದ್ಧಿಕನ್ನಡ ವಾರ್ತೆ
Goa: ಓಲ್ಡ ಗೋವಾದ ಚರ್ಚನಲ್ಲಿರುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಅವರ ಮೃತದೇಹದ DNA ಪರೀಕ್ಷೆ ಮಾಡಬೇಕೆಂಬ ಬೇಡಿಕೆ ಮೊದಲಿನಿಂದಲೂ ಕೇಳಿಬರುತ್ತಿದೆ. ಗೋವಾ ವಿಮೋಚನೆಯ ಮೊದಲು ಮತ್ತು ನಂತರವೂ ಈ ವಿಷಯ ಚರ್ಚೆಯಾಯಿತು. ಶ್ರೀಲಂಕಾದ ಬೌದ್ಧ ಸನ್ಯಾಸಿ ರಾಹುಲ್ ಖೇರಾ ಕೂಡ 2014 ರಲ್ಲಿ ಇದೇ ಬೇಡಿಕೆ ಇಟ್ಟಿದ್ದರು. ಈ ವಿವಾದವನ್ನು ಶಾಶ್ವತವಾಗಿ ಕೊನೆಗೊಳಿಸಿ ಸತ್ಯ ಹೊರಬೇಕಿದೆ ಎಂದು ಈ ಬೇಡಿಕೆ ಇಟ್ಟಿದ್ದೇನೆ. ಯಾರನ್ನೂ ಗೇಲಿ ಮಾಡುವ ಉದ್ದೇಶವಿಲ್ಲ ಎಂದು ಪ್ರೊ. ಸುಭಾಷ ವೆಲಿಂಗಕರ ಹೇಳಿದ್ದಾರೆ.
ಐತಿಹಾಸಿಕವಾಗಿ ಮಹತ್ವದ ಅವಶೇಷಗಳ ಬಗ್ಗೆ ಯಾರಿಗೂ ಅನುಮಾನ ಇರುವುದು ಸರಿಯಲ್ಲ ಎಂದು ವೆಲಿಂಗ್ಕರ್ ಹೇಳಿದರು. ಜಾರ್ಜಿಯಾ ರಾಣಿಯ ಅವಶೇಷಗಳು ಹಳೆಯ ಗೋವಾದಲ್ಲಿ ಕಂಡುಬಂದಿವೆ. ಆಕೆಗೆ ಸಂತ ಪದವಿಯನ್ನು ನೀಡಲಾಗಿತ್ತು. ಜಾರ್ಜಿಯಾ ಚರ್ಚ್ ಪತ್ತೆಯಾದ ಅವಶೇಷಗಳ DNA ಪರೀಕ್ಷೆಗೆ ಅವಕಾಶ ಮಾಡಿಕೊಟ್ಟಿತು. ನಂತರದ ಪರೀಕ್ಷೆಗಳಲ್ಲಿ ಅವಶೇಷಗಳು ರಾಣಿಯದ್ದೇ ಎಂದು ಸಾಬೀತಾಯಿತು. ಸತ್ಯಾಸತ್ಯತೆಯನ್ನು ಪರಿಶೀಲಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಫ್ರೊ. ಸುಭಾಷ ವೇಲಿಂಗಕರ್ ಅಭಿಪ್ರಾಯಪಟ್ಟಿದ್ದಾರೆ.
ನಾನು ಮಾಡಿದ ಬೇಡಿಕೆ ಮತ್ತು ಬೌದ್ಧ ಸನ್ಯಾಸಿಗಳ ಬೇಡಿಕೆ ಒಂದೇ ಆಗಿದೆ. ಅದರಲ್ಲಿ ಆಕ್ಷೇಪಾರ್ಹ ಅಥವಾ ಆಕ್ರಮಣಕಾರಿ ಏನೂ ಇಲ್ಲ. ರಾಜ್ಯದ ಸಂವಿಧಾನದ ಪ್ರಕಾರ, ಐತಿಹಾಸಿಕ ಸತ್ಯವನ್ನು ಪರಿಶೀಲಿಸಲು ವೈಜ್ಞಾನಿಕ ವಿಧಾನಗಳನ್ನು ಬಳಸಬೇಕು. ರಾಮಮಂದಿರ ನಿರ್ಮಾಣಕ್ಕೂ ಮುನ್ನ ಅಲ್ಲಿ ಉತ್ಖನನ ನಡೆಸಲಾಗಿತ್ತು. ಸಂತ ಫ್ರಾನ್ಸಿಸ್ ಕ್ಸೇವಿಯರ್ ಅವರ ಮೃತದೇಹದ ಬಗ್ಗೆ ಜನರಿಗೆ ಅನುಮಾನಗಳಿದ್ದರೆ, ಈ ವಿಚಾರಣೆಯ ನಂತರ ಅದು ದೂರವಾಗಲಿ ಎಂದು ನಾನು ಈ ಬೇಡಿಕೆಯನ್ನು ಇಟ್ಟಿದ್ದೇನೆ. ಯಾವುದೇ ಧರ್ಮವನ್ನು ನೋಯಿಸುವ ಉದ್ದೇಶ ಇದರಲ್ಲಿ ಇಲ್ಲ ಎಂದು ಸುಭಾಷ ವೇಲಿಂಗಕರ್ ಹೇಳಿದ್ದಾರೆ.
ಸಂತ ಫ್ರಾನ್ಸಿಸ್ ಶವದರ್ಶನ ಸಮಾರಂಭ
ಗೋವಾದ ಸಂತ್ ಫ್ರಾನ್ಸಿಸ್ ಜೇವಿಯರ್ ಶವ ದರ್ಶನ ಸಮಾರಂಭವು 2024 ರ ನವೆಂಬರ್ 21 ರಿಂದ 2025 ಜನವರಿ 4 ರವರೆಗೆ ನಡೆಯಲಿದೆ. ಪ್ರಸಕ್ತ ಬಾರಿಯ ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಉತ್ಸವವ್ನಾಗಿ ಆಚರಿಸಲು ಗೋವಾ ಸರ್ಕಾರ ಸಿದ್ಧತೆಯನ್ನೂ ನಡೆಸಿದೆ. ಈ ಸಮಾರಂಭವು 45 ದಿನಗಳ ಕಾಲ ನಡೆಯಲಿದೆ. ಜಗತ್ತಿನಾದ್ಯಂತ ಭಕ್ತಾದಿಗಳು ಮತ್ತು ಪ್ರವಾಸಿಗರು ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ. ಸಂತ್ ಫ್ರಾನ್ಸುಸ್ ಜೇವಿಯರ್ ಶವ ದರ್ಶನ ಸಮಾರಂಭವು ಪ್ರತಿ 10 ವರ್ಷಗಳಿಗೊಮ್ಮೆ ನಡೆಯುತ್ತದೆ.