ಸುದ್ಧಿಕನ್ನಡ ವಾರ್ತೆ
ಪಣಜಿ(ಕಾಣಕೋಣ): ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550 ನೇಯ ವರ್ಷದ ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ಪ್ರತಿದಿನ ಗೋವಾ,ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಿಂದ ಹೆಚ್ಚಿನ ಸಂಖೆಯಲ್ಲಿ ಭಕ್ತು ಆಗಮಿಸುತ್ತಿದ್ದಾರೆ. ಗೋವಾ ಪೋಲಿಸರು ಇಲ್ಲಿಗೆ ಆಗಮಿಸುವ ಭಕ್ತರ ವಾಹನಗಳ ನಿಯಂತ್ರಿಸುವ ವ್ಯವಸ್ಥೆ ಸೇರಿದಣತೆ ಅಗತ್ಯ ಭಧ್ರತಾ ಕಾರ್ಯವನ್ನು ಕೈಗೊಳ್ಳುತ್ತಿದ್ದಾರೆ. ಇಲ್ಲಿ ಬಹುಮುಖ್ಯವಾಗಿ ಹಗಲಿರುಳೆನ್ನದೆಯೇ ಮಠದ ಎಲ್ಲ ಕೆಲಸ ಕಾರ್ಯಗಳಲ್ಲಿ ಸ್ವಯಂ ಸೇವಕರು ಹೆಚ್ಚಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಠಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ವಾಹನ ನಿಲುಗಡೆಗೆ ಸ್ವಲ್ಪ ದೂರದಲ್ಲಿಯೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವಯಂ ಸೇವಕರು ಅಲ್ಲಿ ಬರುವ ಭಕ್ತರಿಗೆ ಚಹಾ ಮತ್ತು ಉಪಹಾರದ ವ್ಯವಸ್ಥೆಯನ್ನೂ ಮಾಡುತ್ತಿದ್ದಾರೆ.

ಮಠಕ್ಕೆ ಆಗಮಿಸುವರಿಗೆ ಹೆಲಿಪ್ಯಾಡ್ ನಿರ್ಮಾಣ ಸ್ಥಳ, ಸರ್ಕಾರಿ ಹೈಸ್ಕೂಲ್, ಮಾಶೆಯ ಮಾಧ್ಯಮಿಕ ಶಾಲೆಯ ಆವರಣದಲ್ಲಿ ಪಾರ್ಕಿಂಗ್ ಸೌಲಭ್ಯವಿದೆ. ಅಲ್ಲಿ ವಾಹನ ಪಾಕಿಂಗ್ ಮಾಡಿದ ನಂತರ ಭಕ್ತರು ಕಾಣಕೋಣ ಮಠಕ್ಕೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಪರ್ತಗಾಳಿ ಮಠದ ಪ್ರವೇಶದ್ವಾರ, ಶ್ರೀರಾಮನ ಪ್ರತಿಮೆ, ಪರ್ತಗಾಳಿ ಮಠದ ಮುಂಭಾಗದ ಪ್ರವೇಶದ್ವಾರ, ಭೋಜನಶಾಲೆ, ಬಳಿ ವಶೇಷ ಪೋಲಿಸ್ ಹಾಗೂ ಪೈಂಗಿಣಿ, ಮಾಶೆ, ಲೋಲಯೆ, ಮೊಖರ್ಡ, ಸಾದೊಳಶೆ, ಮಾಗದಾಳ, ಕೋಳಸರ ದಲ್ಲಿನ ಮಠದ ಭಕ್ತರು ಇಲ್ಲಿ ವಿಶೇಷವಾಗಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ಮೂರು ಹಂತವಾಗಿ ಈ ಸ್ವಯಂ ಸೇವಕರು ಅತ್ಯಂತ ಭಕ್ತಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಕೆಲ ಮಹಿಳೆಯರು ಕೂಡ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಠಕ್ಕೆ ಆಗಮಿಸುವ ಭಕ್ತರಿಗೆ ಬೆಳಿಗ್ಗೆ ಚಹಾ ಉಪಹಾರ, ಮಧ್ಯಾನ್ಹ ಭೋಜನ, ಸಂಜೆ ಚಹಾ ಹಾಗೂ ರಾತ್ರಿ ಭೋಜನ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ನಡೆಸಲು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರು ಸೇವೆ ಸಲ್ಲಿಸುತ್ತಿದ್ದಾರೆ. ಸ್ವಯಂಸೇವಕಾರಿ ಸೇವೆಸಲ್ಲಿಸುತ್ತಿರುವವರಲ್ಲಿ ಹೆಚ್ಚಿನ ಜನರು ಕರ್ನಾಟಕದವರೇ ಆಗಿದ್ದಾರೆ.
