ಸುದ್ಧಿಕನ್ನಡ ವಾರ್ತೆ
ಗೋವಾ(ಕಾಣಕೋಣ): ಗೋವಾದ ಕಾಣಕೋಣದ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550 ನೇಯ ವರ್ಧಂತಿ ಉತ್ಸವದ ಅಂಗವಾಗಿ ಗೋಮಂತಕೀಯ ಸಾರಸ್ವತ ದೇವಸ್ಥಾನ ಮಹಾಜನರಿಂದ ಮಂಗಳವಾರ ಸಂಜೆ ನಾಂದಿ ದರ್ಶನ ಕಾರ್ಯಕ್ರಮ ನಡೆಸಲಾಯಿತು.
ರಾಜ್ಯದ 17 ದೇವಸ್ಥಾನದ ಕಲಾವಿದರಿಂದ ಪಾರಂಪರಿಕ ನಾಂದಿ ದರ್ಶನ ಕಾರ್ಯಕ್ರಮ ನಡೆಸಲಾಯಿತು. ನಾಂದಿ ದರ್ಶನ ಕಾರ್ಯಕ್ರಮದಲ್ಲಿ ಒಟ್ಟೂ 555 ಕಲಾವಿದರು ಪಾಲ್ಗೊಂಡಿದ್ದರು. ಸಂಗೀತ,ವೇಷಭೂಷಣ, ಹಾಗೂ ನಾಟ್ಯಶೈಲಿಯು ಆಗಮಿಸಿದ್ದ ಭಕ್ತಾದಿಗಳ ಗಮನ ಸೆಳೆಯಿತು.
ಶ್ರೀಗೋಕರ್ಣ ಪರ್ತಗಾಳಿ ಮಠದ ಪೀಠಾಧಿಪತಿಗಳಾದ ಶ್ರೀಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ರವರ ಪ್ರೇರಣೆ ಹಾಗೂ ಕೃಪಾಶೀರ್ವಾದದಲ್ಲಿ ಪರ್ತಗಾಳಿ ಮಠದಲ್ಲಿ ನವೆಂಬರ್ 27 ರಿಂದ ಡಿಸೆಂಬರ್ 7 ರ ವರೆಗೆ ಒಟ್ಟೂ 10 ದಿನಗಳ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ.
ಪರ್ತಗಾಳಿ ಮಠಕ್ಕೆ ಪ್ರತಿದಿನ ಭಕ್ತಸಾಗರವೇ ಆಗಮಿಸುತ್ತಿದೆ. ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರೂ ಕೂಡ ಊಟೋಪಚಾರದಲ್ಲಿ ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ಶ್ರೀಮಠದಿಂದ ವ್ಯವಸ್ಥೆ ಮಾಡಲಾಗಿದೆ.
