ಸುದ್ಧಿಕನ್ನಡ ವಾರ್ತೆ
ಪಣಜಿ(ವಾಸ್ಕೊ): ವಾಸ್ಕೊ ದಿಂದ ಸಡಾ ಮಾರ್ಗದ ರುಮಡಾವಾಡಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಹೆಡ್ ಲೆಂಡ್ ಸಡಾದ ಎಂಪಿಟಿ ಕಾಲೋನಿಯಲ್ಲಿ ವಾಸಿಸುತ್ತಿದ್ದ ಮಲ್ಲಿನಾಥ ಗೌಡರ್(55) ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಲಿ ಹೊಡೆದಿದೆ ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ- ವಾಸ್ಕೊ ಬೈನಾ ನಿವಾಸಿ ಶ್ರೀಕೃಷ್ಣ ಬಾಂದೇಕರ್ ಎಂಬ ವ್ಯಕ್ತಿ ಕಾರಿನಲ್ಲಿ ಸಡಾದಿಂದ ವಾಸ್ಕೊ ಮಾರ್ಗವಾಗಿ ತೆರಳುತ್ತಿದ್ದರು. ರುಮಡಾವಾಡಾ ದಲ್ಲಿ ಕಾರ್ ವಾಷಿಂಗ್ ಸೆಂಟರ್ ಬಳಿ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ಮಲ್ಲಿನಾಥ ರವರಿಗೆ ವೇಗಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.

ಈ ಘಟನೆಯಲ್ಲಿ ಮಲ್ಲಿನಾಥ ರವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಕೂಡಲೇ ಅವರನ್ನು ಚಿಕಲಿಯ ಉಪಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ಮುರಗಾಂವ ಪೋಲಿಸರು ಪಂಚನಾಮೆ ನಡೆಸಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೋಲಿಸ್ ಉಪನಿರೀಕ್ಷಕ ಸೂರಜ್ ನಾಯ್ಕ ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.