ಸುದ್ಧಿಕನ್ನಡ ವಾರ್ತೆ
ಪಣಜಿ(ಪೊಂಡಾ) ಗೋವಾದ ಪೆÇೀಂಡಾದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಪೆÇಂಡ ಕನ್ನಡ ಸಂಘದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಹಿರಿಯ ಪತ್ರಕರ್ತರಾದ ಅಜಿತ್ ಹನುಮಕ್ಕನವರ್ ಮತ್ತು ಪ್ರಸಿದ್ಧ ಹಾಸ್ಯ ಕಲಾವಿದರಾದ ಮನು ಹಂದಾಡಿರವರು, ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ಪೆÇೀಂಡಾ ಕನ್ನಡ ಸಂಘದ ಅರ್ಥಪೂರ್ಣ ರಾಜ್ಯೋತ್ಸವದ ಆಚರಣೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಅಜಿತ್ ಹನುಮಕ್ಕನವರ್ ಕನ್ನಡ ನಾಡು ನುಡಿಯ ಬಗ್ಗೆ ಮಾತನಾಡಿ, ಕನ್ನಡ ನನ್ನ ಜೀವನ ಕಟ್ಟಿಕೊಟ್ಟ ಭಾಷೆ, ಮತ್ತು ಕನ್ನಡಿಗರು ಬೇರೆ ರಾಜ್ಯದಲ್ಲಿದ್ದರು ಆ ನೆಲಕ್ಕೂ ಬೆಲೆ ಕೊಟ್ಟು ಗೌರವಿಸುವುದರ ಜೊತೆಗೆ, ನಮ್ಮ ಮೂಲ ಸಂಪ್ರದಾಯಗಳನ್ನು ಮರೆಯದೆ ಇರುವ ಕನ್ನಡಿಗರ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಹಾಸ್ಯ ಕಲಾವಿದರಾದ ಮನು ಹಂದಾಡಿಯವರು ತಮ್ಮ ಕುಂದಾಪುರ ಕನ್ನಡ ಹಾಸ್ಯದ ಮೂಲಕ ಜನರಿಗೆ ಹತ್ತಿರವಾದವರು, ಅವರು ಹಾಸ್ಯದ ಮೂಲಕ ಇಂದಿನ ಮಕ್ಕಳಿಗೆ ಯಾವ ರೀತಿ ಸಂಸ್ಕಾರ ಕೊಟ್ಟು ಬೆಳಸಬೇಕೆಂದು , ಸಂದೇಶ ಸಂಪ್ರದಾಯಗಳನ್ನು ಹಾಸ್ಯದ ಮೂಲಕ ತಿಳಿ ಹೇಳುತ್ತಾ ಕನ್ನಡ ಅಭಿಮಾನವನ್ನ ವ್ಯಕ್ತಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಪೆÇೀಂಡಾ ಕನ್ನಡ ಸಂಘದ ಅಧ್ಯಕ್ಷರು ಶೈಲೇಶ್ ಪಾಟೀಲ್, ಉಪಾಧ್ಯಕ್ಷರಾದ ಸುರೇಶ ಹಡಪದ, ಕಾರ್ಯದರ್ಶಿಯಾದ ಸಿದ್ದಲಿಂಗಯ್ಯ ಹಿರೇಮಠ, ಸಮಾಜ ಸೇವಕರಾದ ಅಮರೇಶ್ ಕಡ್ಲೆರವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸಂಧ್ಯಾರವರು ಅತಿಥಿಗಳ ಪರಿಚಯ ಮಾಡಿದರು, ಮಹಾಲಕ್ಷ್ಮಿ ಮತ್ತು ಪವನ್ ರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಕಾರ್ಯಕ್ರಮ ಅಚ್ಚು ಕಟ್ಟಾಗಿ ಅದ್ಭುತವಾಗಿ ಮೂಡಿಬಂದಿತು.