ಸುದ್ಧಿಕನ್ನಡ ವಾರ್ತೆ
ಪಣಜಿ: ಜೀ ಪವರ್ ಚಾನಲ್ ನಲ್ಲಿ ಪ್ರಸಾರವಾಗುವ ಹಳ್ಳಿ ಪವರ್ ಶೋ ಕಾರ್ಯಕ್ರಮ ತಂಡ ಗೋವಾಕ್ಕೆ ಆಗಮಿಸಿ ಇಲ್ಲಿನ ಕನ್ನಡಿಗರೊಂದಿಗೆ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಗೋವಾದ ವಿವಿದೆಡೆಯಿಂದ 50 ಕ್ಕೂ ಹೆಚ್ಚು ಕನ್ನಡಿಗರು ಪಾಲ್ಗೊಂಡಿದ್ದರು. ಶುಕ್ರವಾರ ಸಂಜೆ ಬೋಟ್ ನಲ್ಲಿ ಹಳ್ಳಿ ಪವರ್ ಶೋ ಕಾರ್ಯಕ್ರಮದ 4 ಗಂಟೆಗಳ ಚಿತ್ರೀಕರಣ ಪೂರ್ಣಗೊಳಿಸಿದೆ.


ಹಳ್ಳಿ ಪವರ್ ಶೋ ಕಾರ್ಯಕ್ರಮದ ಪ್ರಮುಖ ಹಾಗೂ ಬಿಗ್ ಬಾಸ್ 2ರ ವಿನ್ನರ್ ಆಗಿರುವ ಅಕುಲ್ ಬಾಲಾಜಿ ರವರನ್ನು ಗೋವಾ ಕನ್ನಡ ಸಮಾಜ ಪಣಜಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್, ಕಾರ್ಯದರ್ಶಿ ಶ್ರೀಕಾಂತ ಲೋಣಿ, ಕಾರ್ಯಕಾರಿ ಸಮೀತಿಯ ಸದಸ್ಯರಾದ ಶಾಮಸುದ್ದೀನ್ ಸೊಲ್ಲಾಪುರಿ, ಪ್ರಕಾಶ್ ಭಟ್, ಸುನೀಲ್ ಕುಮಟಳ್ಳಿ,ಮಂಜುನಾಥ ದೊಡ್ಡಮನಿ, ಖಾಯಂ ನಿಮಂಂತ್ರಿತ ಸದಸ್ಯರಾದ ವಿಶ್ವನಾಥ ಭಟ್ ಮತ್ತಿತರರು ಉಪಸ್ಥಿತರಿದ್ದರು.


ಗೋವಾದ ವಿವಿದೆಡೆ ನೆಲೆಸಿರುವ ಪ್ರಮುಖವಾಗಿ ಉತ್ತರಕನ್ನಡ ಭಾಗದ ಹವ್ಯಕ ಕುಟುಂಬದ 40 ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೋಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಳ್ಳಿ ಪವರ್ ತಂಡ ಉಚಿತ ಪಾಸ್ ವ್ಯವಸ್ಥೆ ಮಾಡಿತ್ತು.