ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಶಿಲ್ಪಲೋಕ ಸ್ಥಾಪಿಸಿದ ಪುಟ್ಟಸ್ವಾಮಿ ಗುಡಿಗಾರ್ ರವರನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರು ಬೆಂಗಳೂರಿನಲ್ಲಿ ವಿಶೇಷವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಮತ್ತಿತರರು ಉಪಸ್ಥಿತರಿದ್ದರು.
ಗೋವಾ ರಾಜ್ಯದಲ್ಲಿ ಕಳೆದ ಅನೇಕ ವರ್ಷಗಳಿಂದ ಪುಟ್ಟಸ್ವಾಮಿ ಗುಡಿಗಾರ್ ರವರು ಸ್ಥಾಯಿಕರಾಗಿದ್ದು, ಗೋವಾದಲ್ಲಿ ಹಲವು ದೇವಾಲಯಗಳಲ್ಲಿಯೂ ಕೂಡ ಇವರ ಶಿಲ್ಪ ಲೋಕದಿಂದ ಕೆತ್ತಿದ ಮೂರ್ತಿಗಳೇ ಪೂಜಿಸಲ್ಪಡುತ್ತಿದೆ. ಇಂತಹ ಹಿರೀಯ ಕಲಾವಿದರನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಸನ್ಮಾನಿಸಿದರು.
