ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಬಂಗಾರ ಕದ್ದು ಕರ್ನಾಟಕಕ್ಕೆ ಪರಾರಿಯಾಗಿದ್ದ ಆರೋಪಿಗಳನ್ನು ಗೋವಾದ ಮಡಗಾಂವ ಹಾಗೂ ಬೆಳಗಾವಿ ಪೋಲಿಸರು ಜಂಟಿ ಕಾರ್ಯಾಚರಣೆ ನಡೆಸಿ ಕರ್ನಾಟಕದ ಬೆಳಗಾವಿಯಿಂದ ಆರೋಪಿಗಳನ್ನು ಬಂಧಿಸಿ ಕರೆತರುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಕಳೆದ ಅಕ್ಟೋಬರ್ ನಲ್ಲಿ ಗೋವಾದ ಮಡಗಾಂವ ನಾವೇಲಿಯಲ್ಲಿ ಬಂಗಾರದ ಆಂಬರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನ್ ರಾವುತ್ (22), ನಾಗರಾಜ್ ಹರನಿಶಿಕಾರಿ (19) ಎಂಬ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

ಗೋವಾದ ಮಡಗಾಂವ ನಾವೇಲಿಯಲ್ಲಿ ಕಳ್ಳತನ ನಡೆಸಿದ ಸಿಸಿಟಿವಿ ಪುಟೇಜ್ ಆಧಾರದ ಮೇಲೆ ಗೋವಾ ಮಡಗಾಂವ ಪೋಲಿಸರು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಆರೋಪಿಗಳು ಕರ್ನಾಟಕದಲ್ಲಿ ಅಡಗಿ ಕುಳಿತಿರುವ ಶಂಕೆಯ ಮೇಲೆ ಗೋವಾ ಪೋಲಿಸರು ಬೆಳಗಾವಿ ಪೋಲಿಸರು ಜಂಟಿ ಕಾರ್ಯಾಚರಣೆ ನಡೆಸಿ ಹುಬ್ಬಳ್ಳಿ ನಿವಾಸಿಗಳಾಗಿದ್ದ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿ ಗೋವಾಕ್ಕೆ ಕರೆತಂದಿದ್ದಾರೆ. ಈ ಕಳ್ಳರು ಕಳ್ಳತನ ನಡೆಸಿದ್ದ ಬಂಗಾರದ ಆಭರಣ ಜಪ್ತಿ ಮಾಡಿದ್ದಾರೆ. ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.