ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಕೇವಲ ಪ್ರವಾಸಿ ತಾಣ ಮಾತ್ರವಲ್ಲದೆಯೇ ಗೋವಾದಲ್ಲಿ ಧಾರ್ಮಿಕ ಆಚರಣೆಗಳು ಮತ್ತು ಸಂಸ್ಕøತಿಗಳು ಕೊಂಚ ವಿಭಿನ್ನ ಮತ್ತು ಆಕರ್ಷಣೆಯಿಂದ ಕೂಡಿವೆ. ಗೋವಾದಲ್ಲಿ ಹಬ್ಬ ಹರಿದಿನಗಳ ಆಚರಣೆಯಲ್ಲಿಯೂ ಕೊಂಚ ಬದಲಾವಣೆ ಕಂಡುಬರುತ್ತದೆ. ಸದ್ಯ ರಾಜ್ಯದಲ್ಲಿ ತುಳಸಿ ವಿವಾಹ ಆರಂಭಗೊಂಡಿದ್ದು ಕರ್ನಾಟಕದಿಂದ ಬರುವ ಪುರೋಹಿತರಿಂದಲೇ ಪ್ರಮುಖವಾಗಿ ಗೋವಾದಲ್ಲಿ ಪೂಜೆ ನೆರವೇರಿಸಲಾಗುತ್ತಿದೆ.
ಗೋವಾ ರಾಜ್ಯದಲ್ಲಿ ಎಲ್ಲ ಹಬ್ಬ ಹರಿದಿನಗಳ ಆಚರಣೆಯಲ್ಲಿ ಪುರೋಹಿತರೇ ಪ್ರಮುಖವಾಗಿರುತ್ತಾರೆ. ಪುರೋಹಿತರಿಲ್ಲದೆಯೇ ಯಾವುದೇ ಪೂಜೆಯನ್ನೂ ನೆರವೇರಿಸಲಾಗುವುದಿಲ್ಲ. ಸದ್ಯ ತುಳಸಿ ವಿವಾಹ ನಡೆಯುತ್ತಿದ್ದು ಕಾರ್ತಿಕ ದ್ವಾದಶಿಯಿಂದ ಕಾರ್ತಿಕ ಪೌರ್ಣಮಿಯ ವರೆಗೂ ತುಳಸಿ ವಿವಾಹ ನೆರವೇರಿಸಲಾಗುತ್ತದೆ. ತುಳಸಿ ವಿವಾಹ ಮಾಡಲು ಗೋವಾದಲ್ಲಿ ಪುರೋಹಿತರು ಬೇಕೇ ಬೇಕು.
ಪ್ರತಿ ಮನೆ ಮನೆಯಲ್ಲಿಯೂ ಪುರೋಹಿತರನ್ನು ಕರೆಯಿಸಿಯೇ ತುಳಸಿ ವಿವಾಹ ನೆರವೇರಿಸಲಾಗುತ್ತದೆ. ತುಳಸಿ ವಿವಾಹದ ಸಂದರ್ಭದಲ್ಲಿ ಮಂಗಲಾಷ್ಠಕವನ್ನು ಹೇಳಿಯೇ ತುಳಸಿ ವಿವಾಹ ನಡೆಸುವ ವಿಶಿಷ್ಠ ಪದ್ಧತಿ ಗೋವಾದಲ್ಲಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗೋವಾದಲ್ಲಿ ಪೂಜಾ ಕಾರ್ಯ ನಡೆಯುವುದರಿಂದ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪುರೋಹಿತರು ಆಗಮಿಸುತ್ತಾರೆ. ಪ್ರಮುಖವಾಗಿ ಕಾರ್ತಿಕ ದ್ವಾದಶಿಯಂದು ತುಳಸಿ ವಿವಾಹ ನೆರವೇರಿಸಲಾಗುತ್ತದೆ. ನಂತರ ಕಾರ್ತಿಕ ಪೌರ್ಣಮಿಯ ವರೆಗೂ ಕೂಡ ತುಳಸಿ ವಿವಾಹವನ್ನು ನೆರವೇರಿಸಲಾಗುತ್ತದೆ. ಉತ್ತರಕನ್ನಡ ಜಿಲ್ಲೆಯಿಂದಲೇ ಗೋವಾಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ ಪುರೋಹಿತರು ಆಗಮಿಸುವುದು ವಿಶೇಷವಾಗಿದೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ, ಶಿರಸಿ, ಗೋಕರ್ಣ, ಕುಮಟಾ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪುರೋಹಿತರು ತುಳಸಿ ವಿವಾಹ ಕ್ಕೆ ಗೋವಾಕ್ಕೆ ಆಗಮಿಸಿ ಪೂಜೆ ನೆರವೇರಿಸಿದ್ದಾರೆ.
ಗೋವಾ ರಾಜ್ಯವು ಕೇವಲ ಪ್ರವಾಸಿ ತಾಣ ಮಾತ್ರವಲ್ಲದೆಯೇ ಧಾರ್ಮಿಕತೆಯಲ್ಲಿಯೂ ಅಷ್ಟೇ ಮಹತ್ವವನ್ನು ಉಳಿಸಿಕೊಂಡು ಬಂದಿದೆ.
