ಸುದ್ಧಿಕನ್ನಡ ವಾರ್ತೆ
ಪಣಜಿ: ಬರುವ ಡಿಸೆಂಬರ್ ತಿಂಗಳಿಂದ ಗೋವಾದಲ್ಲಿ ವಿದ್ಯುತ್ ಸ್ಮಾರ್ಟ ಮೀಟರ್ ಗಳು ಕಾರ್ಯನಿರ್ವಹಿಸಲಿವೆ. ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ಕಡಿಮೆ ವಿದ್ಯುತ್ ಬಳಕೆದಾರರಿಗೆ ಬಿಲ್ ನಲ್ಲಿ ಶೇ 20 ರಷ್ಟು ರಿಯಾಯತಿ ನೀಡಲಾಗುವುದು. ಸಂಜೆ 5 ಗಂಟೆಯ ನಂತರ ಅಧಿಕ ವಿದ್ಯುತ್ ಬಳಕೆದಾರರಿಗೆ, ವಿದ್ಯುತ್ ವ್ಯರ್ಥ ಮಾಡಿದರೆ ಅವರಿಗೆ ಶೇ 20 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುವುದು ಎಂದು ಸಚಿವ ಸುದೀನ ಧವಳೀಕರ್ ಮಾಹಿತಿ ನೀಡಿದ್ದಾರೆ.

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು-ಎರಡು ವರ್ಷಗಳ ಅಧ್ಯಯನದ ನಂತರವೇ ಸರ್ಕಾರ ಈ ಪ್ರಸ್ತಾವನೆಯನ್ನು ಅನುಮೋದಿಸಿದೆ ಎಂದು ಅವರು ಮಾಹಿತಿ ನೀಡಿದರು. ರಾಜ್ಯ ಸರ್ಕಾರ ಇನ್ನೂ ಸ್ವಂತ ವಿದ್ಯುತ್ ಉತ್ಪಾದಿಸುತ್ತಿಲ್ಲ. ವಿದ್ಯುತ್ ನ್ನು ಇತರ ರಾಜ್ಯಗಳಿಂದ ಖರೀದಿಸಬೇಕಿದೆ. ಆದ್ಧರಿಂದ ಇದನ್ನು ದುರುಪಯೋಗ ಪಡಿಸಿಕೊಳ್ಳಲಾಗುವುದಿಲ್ಲ ಎಂದು ಸಚಿವ ಧವಳೀಕರ್ ಮಾಹಿತಿ ನೀಡಿದರು.

ವಿದ್ಯುತ್ ಇಲಾಖೆಯು ರಾಜ್ಯದಲ್ಲಿ ಎಲ್ಲ ಮನೆಗಳಿಗೆ ಸ್ಮಾರ್ಟ ಮೀಟರ್ ಅಳವಡಿಸಲಿದ್ದು, ಡಿಸೆಂಬರ್ ನಿಂದ ಅವುಗಳನ್ನು ಜಾರಿಗೆ ತರಲಾಗುವುದು. ರಾತ್ರಿಯ ವೇಳೆ ಕಾರಣವಿಲ್ಲದೆಯೇ ವಿದ್ಯುತ್ ವ್ಯರ್ಥ ಮಾಡುವವರು ಅಥವಾ ವಿದ್ಯುತ್ ದುರುಪಯೋಗ ಪಡಿಸಿಕೊಳ್ಳುವವರು ಹೆಚ್ಚುವರಿ ಬಿಲ್ ಪಾವತಿಸಬೇಕಾಗುತ್ತದೆ ಎಂದು ಸಚಿವ ಧವಳೀಕರ್ ಮಾಹಿತಿ ನೀಡಿದರು.