ಸುದ್ಧಿಕನ್ನಡ ವಾರ್ತೆ
ಪಣಜಿ: ತರಕಾರಿಗಾಗಿ ನೆರೆಯ ರಾಜ್ಯವನ್ನು ಅವಲಂಬಿಸುವ ಬದಲಾಗಿ ಗೋವಾದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆದು ಸ್ವಯಂ ಪೂರ್ಣ ಗೋವಾ ವನ್ನಾಗಿಸುವ ಉದ್ದೇಶದಿಂದ ತರಕಾರಿ ಬೆಳೆಯಲ್ಲಿ ಹೊಸಹೊಸ ಪ್ರಯೋಗ ನಡೆಸುತ್ತಿರುವ ವರದ್ ಸಾಮಂತ ಎಂಬ ಯುವಕನನ್ನು ಗೋವಾ ರಾಜ್ಯ ಸರ್ಕಾರವು ಕೃಷಿದೂತ ಎಂದು ಆಯ್ಕೆ ಮಾಡಿದೆ.

ಗೋವಾ ರಾಜ್ಯದಲ್ಲಿ ತರಕಾರಿ ಬೆಳೆಯಲ್ಲಿ ಹೊಸ ಹೊಸ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿ ವರದ್ ಎಂಬ ಯುವಕ ಇತರ ಕೃಷಿಕರಿಗೆ ಆದರ್ಶ ನಾಗಿದ್ದಾನೆ. ಈ ನದಿಯಲ್ಲಿ ಗೋವಾ ರಾಜ್ಯ ಸರ್ಕಾರವು ವರದ್ ಸಾಮಂತ ಯುವಕನಿಗೆ ಕೃಷಿದೂತ ಎಂದು ಆಯ್ಕೆ ಮಾಡಿದೆ. ಗೋವಾ ಸರ್ಕಾರವು ಕೃಷಿದೂತ ಎಂದು ಮೊಟ್ಟಮೊದಲ ಬಾರಿಗೆ ಆಯ್ಕೆ ಮಾಡಿದೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಕೃಷಿ ಸಂಚಾಲನಾಲಯ ಹಾಗೂ ಗೋವಾ ಫಲವತ್ಪಾದನ ಮಹಾಮಂಡಳ ಟೀ ಕುರಿತಂತೆ ಸೂಚನೆ ನೀಡಿ , ವರದ್ ಸಾಮಂತ್ ರವರ ಮಾರ್ಗದರ್ಶನದಲ್ಲಿ ಪ್ರತಿ ತಾಲೂಕಿನಲ್ಲಿ ಕೃಷಿ ಶಿಕ್ಷಣ ಕಾರ್ಯಕ್ರಮ ಆಯೋಜಿಸಬೇಕು. ಗೋವಾ ರಾಜ್ಯದಲ್ಲಿ ತರಕಾರಿ ಉತ್ಪಾದನೆಯನ್ನು ಹೇಗೆ ಹೆಚ್ಚಿಸಬೇಕು ಎಂಬ ದೃಷ್ಟಿಯಲ್ಲಿ ವರದರವರು ಮಾರ್ಗದರ್ಶನ ನೀಡಬೇಕು. ಇದರಿಂದಾಗಿ ರಾಜ್ಯದಲ್ಲಿ ಕೃಷಿಕರು ತರಕಾರಿ ಬೆಳೆ ಹೆಚ್ಚಿಸಲು ಸಹಾಯವಾಗಲಿದೆ ಎಂದು ಸೂಚನೆ ನೀಡಿದೆ.

ವರದ ಸಾಮಂತರವರು ಕಳೆದ 12 ರಿಂದ 13 ವರ್ಷಗಳಿಂದ ಗೋವಾದ ದಾಬಾಳ ದಾರಾಬಾಂದೋಡ ದಲ್ಲಿ ತರಕಾರಿ ಬೆಳೆಯಲ್ಲಿ ಹೊಸತನವನ್ನು ಕಂಡುಕೊಂಡಿದ್ದಾರೆ. ತಮ್ಮ ಎಂಟು ಎಕರೆ ಜಮೀನಿನಲ್ಲಿ ಗಜ್ಜರಿ, ಸವತೇಕಾಯಿ ಹಸಿಮೆಣಸು, ಕಲ್ಲಂಗಡಿ ಹೀಗೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ ಹಾಗೂ ಮಾದರಿಯಾಗಿದ್ದಾರೆ. ಈ ಯಶಸ್ಸಿನಿಂದಾಗಿ ಸದ್ಯ ವರದ್ ಸಾಮಂತ್ ರವರು ಗೋವಾ ರಾಜ್ಯ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಕೃಷಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಒಂದು ವೇಳೆ ಕೃಷಿಕರ ಬಳಿ ಒಂದು ಎಕರೆ ಜಮೀನು ಇದ್ದಲ್ಲಿ ಅವರು ತರಕಾರಿ ಬೆಳೆದು ವರ್ಷವೊಂದಕ್ಕೆ 6 ಲಕ್ಷ ರೂ ಆದಾಯ ಗಳಿಸಬಹುದು ಎಂದು ವರದ ಸಾಮಂತ್ ರವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.