ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಪೋರ್ಚುಗೀಸರ ಅಧಿಕಾರಾವಧಿಯಲ್ಲಿ 1000 ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿದೆ, ಎಂದು ಗೋವಾದಲ್ಲಿ ಪುರಾತತ್ವ ಇಲಾಖೆಯು ನೇಮಿಸಿರುವ ಸಮೀತಿಯು ಗೋವಾ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಿದ್ದು ಆಸ್ತಿಕ ಹಿಂದೂಗಳನ್ನು ಬೆಚ್ಚಿಬೀಳಿಸಿದೆ. ಈ ನಿಟ್ಟಿನಲ್ಲಿ ಗೋವಾ ಸರ್ಕಾರವು ಪೋರ್ಚುಗೀಸರು ನಷ್ಠಗೊಳಿಸಿದ್ದ 1000 ದೇವಸ್ಥಾನಗಳ ಸ್ಮರಣಾರ್ಥ ಸ್ಮಾರಕ ಮಂದಿರ ನಿರ್ಮಿಸಲು ಮುಂದಾಗಿದೆ.

ಈ ಕುರಿತಂತೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು-ಗೋವಾದ ದಿವಾಡಿ ದ್ವೀಪದಲ್ಲಿ ಶ್ರೀ ದೇವ ಸಪ್ತಕೋಟೇಶ್ವರ ಮೂಲ ಸ್ಥಾನದಲ್ಲಿ ಗೋವಾ ರಾಜ್ಯ ಸರ್ಕಾರವು ಸ್ಮಾರಕ ಮಂದಿರವನ್ನು ನಿರ್ಮಾಣ ಮಾಡಲಿದೆ. ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆ ಸಂದರ್ಭದಲ್ಲಿ ಕೆಡವಿದ್ದ ಎಲ್ಲ ಮಂದಿರಗಳ ಸ್ಮøತಿ ರಕ್ಷಿಸಲು ಈ ಮಂದಿರದ ನಿರ್ಮಾಣ ಕೈಗೊಳ್ಳಲಾಗುವುದು. ಕೋಟಿತೀರ್ಥ ಕಾರಿಡಾರ್ ಎಂಬ ಹೆಸರಿನ ಯೋಜನೆಯ ಅಡಿಯಲ್ಲಿ ಈ ಮಂದಿರದ ನಿರ್ಮಾಣ ಕೈಗೊಳ್ಳಲಾಗುವುದು ಎಂದು ಮಂತ್ರಿಮಂಡಲ ಬೈಠಕ್ ನಂತರ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.

ಮಂದಿರದ ಸ್ವರೂಪ ಹಾಗೂ ಇತರ ವಿಷಯಗಳ ಕುರಿತು ಇನ್ನೂ ನಿರ್ಧಾರ ಕೈಗೊಳ್ಳಬೇಕಿದೆ. ಪುರಾತತ್ವ ಖಾತೆಯು ನೇಮಿಸಿರುವ ಸಮೀತಿಯ ಶಿಫಾರಸ್ಸಿನ ಅನುಸಾರ ಈ ಮಂದಿರವನ್ನು ಗೋವಾದ ದಿವಾಡಿಯ ಪುರಾತತ್ವ ಇಲಾಖೆಯ ಜಾಗದ 10,000 ಚೌರಸ್ ಮೀಟರ್ ಜಾಗದಲ್ಲಿ ಈ ಮಂದಿರ ನಿರ್ಮಾಣ ಕೈಗೊಳ್ಳುವ ಕುರಿತಂತೆ ಮಂತ್ರಿಮಂಡಲ ಬೈಠಕ್ ನಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.
ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆಯ ಸಂದರ್ಭದಲ್ಲಿ ಕೆಡವಿದ ಮಂದಿರಗಳ ಕುರಿತು ಅಭ್ಯಾಸ ನಡೆಸಲು ಗೋವಾ ರಾಜ್ಯ ಸರ್ಕಾರವು ಪಂಚ ಸದಸ್ಯರ ಸಮೀತಿಯನ್ನು ನೇಮಕ ಮಾಡಿತ್ತು. ಈ ಸಮೀತಿಯು ತನ್ನ ವರದಿಯನ್ನು ಗೋವಾ ರಾಜ್ಯ ಸರ್ಕಾರದ ಬಳಿ ಸಲ್ಲಿಸಿತ್ತು. ಈ ವರದಿಯಲ್ಲಿ ಗೋವಾದಲ್ಲಿ ಪೋರ್ಚುಗೀಸರ ಅಧಿಕಾರಾವಧಿಯಲ್ಲಿ 1000 ಕ್ಕೂ ಹೆಚ್ಚು ದೇವಸ್ಥಾನಗಳು ನಷ್ಠವಾಗಿದೆ ಎಂಬುದನ್ನು ನಮೂದಿಸಲಾಗಿದೆ. ಈ ಹಿನ್ನೆಯಲ್ಲಿ ಸಮೀತಿಯು “ಸ್ಮಾರಕ ದೇವಾಲಯ” ಹಾಗೂ ಸಂಗ್ರಹಾಲಯ ನಿರ್ಮಿಸಲು ರಾಜ್ಯ ಸರ್ಕಾರದ ಬಳಿ ಶಿಫಾರಸ್ಸು ಮಾಡಿತ್ತು.

ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆಯ ಸಂದರ್ಭದಲ್ಲಿ ಗೋವಾದ ತಿಸವಾಡಿ, ಬಾರ್ದೇಸ್, ಸಾಸಷ್ಠಿ ತಾಲೂಕಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದೇವಸ್ಥಾನಗಳನ್ನು ನಷ್ಠಗೊಳಿಸಲಾಗಿತ್ತು. ಈ ಎಲ್ಲ ದೇವಸ್ಥಾನಗಳನ್ನು ಪುನರ್ ನಿರ್ಮಾಣ ಸಾಧ್ಯವಿಲ್ಲ. ಆದರೆ ಗೋವಾದ ದಿವಾಡಿಯಲ್ಲಿರುವ ಸಪ್ತಕೋಟೇಶ್ವರ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಯೋಗ್ಯವಾಗಿದೆ ಎಂಬ ಸಲಹೆಯನ್ನೂ ಸಮೀತಿಯು ನೀಡಿತ್ತು.

ದಿವಾಡಿಯಲ್ಲಿ ಪ್ರತಿಕಾತ್ಮಕ ಸ್ಮಾರಕ ಹಾಗೂ ಸಂಗ್ರಹಾಲಯವನ್ನು ನಿರ್ಮಿಸಿ ನಷ್ಠಗೊಂಡಿರುವ ದೇವಸ್ಥಾನಗಳ ಇತಿಹಾಸ , ಪುರಾವೆ, ಗಳನ್ನು ಪ್ರದರ್ಶಿಸಬೇಕು. ಈ ಕುರಿತಂತೆ ಸಂಸೋಧನೆ ಹಾಗೂ ಪುರಾತತ್ವ ಅಭ್ಯಾಸಕ್ಕೆ ಚಾಲನೆ ನೀಡಲು ಸ್ಥಾನಿಕ ತಜ್ಞರನ್ನು ಸೇರಿಸಿಕೊಳ್ಳಬೇಕು ಎಂದು ಸಮೀತಿಯು ತನ್ನ ವರದಿಯಲ್ಲಿ ಗೋವಾ ಸರ್ಕಾರಕ್ಕೆ ವರದಿ ನೀಡಿತ್ತು.


A committee appointed by the Department of Archeology in Goa has mentioned in its report to the Goa government that 1000 Hindu temples were destroyed during the Portuguese rule in Goa, which has shocked the devout Hindus. In this regard, the Goa government has decided to build a memorial temple to commemorate the 1000 temples destroyed by the Portuguese.