ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ-ಬೆಳಗಾವಿ ಸಂಪರ್ಕಿಸುವ ಚೋರ್ಲಾ ಘಾಟ್ ರಸ್ತೆ ಇತ್ತೀಚಿನ ದಿನಗಳಲ್ಲಿ ಅಪಘಾತ ಹೆಚ್ಚುತ್ತಲೇ ಇದೆ. ಮಳೆಗಾಲದ ಸಂದರ್ಭದಲ್ಲಂತೂ ಈ ಮಾರ್ಗ ಅತ್ಯಂತ ಆತಂಕಕಾರಿ ಮಾರ್ಗ ಎಂಬಂತಾಗಿದೆ.

ಗೋವಾ-ಬೆಳಗಾವಿ ಸಂಪರ್ಕಿಸುವ ಚೋರ್ಲಾ ಘಾಟ್ ರಸ್ತೆಯಲ್ಲಿ ಪ್ರದಿನ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಓಡಾಟ ನಡೆಸುತ್ತದೆ. ಘಾಟ್ ಭಾಗದಲ್ಲಿ ರಸ್ತೆ ಅತ್ಯಂತ ಕಿರಿದಾಗಿರುವುದರಿಂದ ಹಾಗೂ ಮಳೆಗಾಲದ ಸಂದರ್ಭದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಗೋವಾದ ಕೇರಿ ಚೆಕ್ ಪೋಸ್ಟನಿಂದ ಘಾಟ್ ಮಾರ್ಗ ಅತ್ಯಂತ ಕಿರಿದಾಗಿದೆ.

ಚೋರ್ಲಾ ಘಾಟ್ ರಸ್ತೆಯಲ್ಲಿ ಮಳೆಗಾಲದಲ್ಲಂತೂ ಯಾವಾಗ ರಸ್ತೆಯಲ್ಲಿ ಮರ ಬೀಳುತ್ತದೆಯೋ, ಯಾವಾಗ ಗುಡ್ಡ ಕುಸಿಯುತ್ತದೆಯೋ ಎಂಬ ಆತಂಕದಿಂದಲೇ ವಾಹನ ಸವಾರರು ಓಡಾಟ ನಡೆಸುವಂತಾಗಿದೆ. ಪ್ರಸಕ್ತ ವರ್ಷ ಮಳೆಗಾಲದಲ್ಲಂತೂ ಹಲವು ಬಾರಿ ಒಂದಿಲ್ಲೊಂದು ಕಾರಣದಲ್ಲಿ ಹಲವು ಬಾರಿ ಗಂಟೆಗಟ್ಟಲೆ ವಾಹನ ಸಂಚಾರ ಬಂದ್ ಆದ ಘಟನೆ ಕೂಡ ನಡೆದಿದೆ.

ಚೋರ್ಲಾ ಘಾಟ್ ಮಾರ್ಗವು ಗೋವಾ-ಬೆಳಗಾವಿ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ.ಖೀ ಮಾರ್ಗದಲ್ಲಿ ಪ್ರತಿದಿನ ತರಕಾರಿ, ಹಾಲು, ಕಿರಾಣಿ ಸಾಮಗ್ರಿಗಳು, ಹಣ್ಣು-ಹೂವು ಸೇರಿದಂತೆ ಪ್ರಮುಖ ಅಗತ್ಯ ವಸ್ತಗಳು ಕರ್ನಾಟಕದಿಂದಲೇ ಅದು ಈ ಮಾರ್ಗದಲ್ಲಿಯೇ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತದೆ. ಆದರೆ ಈ ಮಾರ್ಗದಲ್ಲಿ ಅಪಘಾತದ ಹೆಚ್ಚಳವು ಆತಂಕಕ್ಕೆ ಕಾರಣವಾಗಿದೆ. ವಾಹನ ಸವಾರರು ಭಯದಿಂದಲೇ ಓಡಾಟ ನಡೆಸುವಂತಾಗಿದೆ.