ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯ ಮಾಹಿತಿ ಮತ್ತು ಪ್ರಸಾರ ಖಾತೆಯ ವತಿಯಿಂದ ಗೋವಾದಲ್ಲಿ ಪೊಟೊ ಸ್ಫರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಫರ್ಧೆಯಲ್ಲಿ “ವಿಕಸಿತ ಗೋವಾ” ಮತ್ತು “ಗೋವಾದ ಅರಣ್ಯ ಹಾಗೂ ವನ್ಯಜೀವಿ” ಎಂಬ ಎರಡು ವಿಭಾಗಗಳನ್ನು ಮಾಡಲಾಗಿದೆ.ಈ ಎರಡು ವಿಭಾಗಗಳಲ್ಲಿ ಸ್ಫರ್ಧಿಗಳು ತಾವು ತೆಗೆದ ಛಾಯಾಚಿತ್ರವನ್ನು ನೀಡಬಹುದಾಗಿದೆ. ಸ್ಫರ್ಧೆಗೆ ಯಾವುದೇ ಪ್ರವೇಶ ಶುಲ್ಕ ವಿಧಿಸಿಲ್ಲ ಹಾಗೂ ಯಾವುದೇ ನಿಬಂಧನೆಗಳನ್ನೂ ವಿಧಿಸಿಲ್ಲ.
ಗೋವಾ ಪೊಟೊ ಸ್ಫರ್ಧೆ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನೂ ಇಡಲಾಗಿದೆ. ಮೊದಲ ವಿಜೇತರಿಗೆ 20,000 ರೂ, ಎರಡನೇಯ ವಿಜೇತರಿಗೆ 16,000 ರೂ, ಮೂರನೇಯ ವಿಜೇತರಿಗೆ 12,000 ರೂ ಬಹುಮಾನ ನೀಡಲಾಗುತ್ತಿದೆ. ಇಷ್ಟೇ ಅಲ್ಲದೆಯೇ ಎರಡೂ ವಿಭಾಗದಲ್ಲಿ ಪ್ರತ್ಯೇಕ ಐದು ಉತ್ತೇಜನಕಾರಿ ಬಹುಮಾನವಿದ್ದು ಇದರಲ್ಲಿ ಪ್ರತಿಯೊಬ್ಬರಿಗೂ 2000 ರೂ ಹಣ ಹಾಗೂ ಪ್ರಶಸ್ತಿ ಪತ್ರವನ್ನೂ ನೀಡಲಾಗುತ್ತದೆ.
ಸ್ಫರ್ಧೆಯಲ್ಲಿ ಪಾಲ್ಗೊಳ್ಳಲು ಸ್ಫರ್ಧಾಳುಗಳು 12/ 8 ಇಂಚು ಆಕಾರದ ಪೊಟೊ ಕಳಿಸಬೇಕು. ಒಬ್ಬ ಸ್ಫರ್ಧಿ ಹೆಚ್ಚೆಂದರೆ ನಾಲ್ಕು ಪೊಟೊ ಕಳುಹಿಸಬಹುದಾಗಿದೆ. ಪ್ರವೇಶ ಪತ್ರದೊಂದಿಗೆ ತಮ್ಮ ಮನೆಯ ವಿಳಾಸ ದಾಖಲೆ ನೀಡುವುದು ಖಡ್ಡಾಯವಾಗಿದೆ. ಮೊಬೈಲ್ ಪೋಟೊಗಳನ್ನು ಸ್ವೀಕರಿಸುವುದಿಲ್ಲ. ಅರ್ಜಿ ಸಲ್ಲಿಸಲು 10 ಅಕ್ಟೋಬರ್ 2025 ಸಂಜೆ 5 ಗಂಟೆಯವರೆಗೆ ಸಮಯವಿದೆ.
ಸ್ಫರ್ಧಾ ವಿಜೇತರಿಗೆ ನವೆಂಬರ್ 16 ರಂದು ರಾಷ್ಟ್ರೀಯ ಪತ್ರಿಕಾದಿನದಂದು ಬಹುಮಾನ ವಿತರಿಸಕಲಾಗುವುದು. ಆಸಕ್ತರು ಮಾಹಿತಿ ಹಾಗೂ ಪ್ರಸಾರ ಖಾತೆ ಸಂಚಾಲಕ ಉದ್ಯೋಗ ಭವನ, ಮೂರನೇಯ ಮಹಡಿ, ಗೋವಾ ಇಲ್ಲಿ ಪ್ರವೇಶ ಪತ್ರ ಕಳುಹಿಸಬೇಕು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಮಾಹಿತಿ ನೀಡಿದೆ.
Poto Competition is organized in Goa by Goa State Information and Broadcasting Department. Two categories have been made in this competition namely “Developed Goa” and “Goa Forest and Wildlife”. In these two categories contestants can submit their photographs. There is no entry fee for the competition and no regulations.