ಸುದ್ಧಿಕನ್ನಡ ವಾರ್ತೆ
ಪಣಜಿ: ಕರ್ನಾಟಕದಿಂದ 1 ಲಕ್ಷ ತೆಂಗಿನ ಕಾಯಿ ಖರೀದಿಸಿದ ಗೋವಾ ಸರ್ಕಾರ ಗೋವಾದಲ್ಲಿ ಸಬ್ಸಿಡಿ ದರದಲ್ಲಿ ತೆಂಗಿನ ಕಾಯಿ ಪೂರೈಕೆ ಮಾಡಿದ್ದರಿಂದ ಸದ್ಯ ಗೋವಾ ರಾಜ್ಯದಲ್ಲಿ ಏರುತ್ತಿದ್ದ ತೆಂಗಿನ ಕಾಯಿ ದರ ಇಳಿಕೆಯಾಗಿದೆ. ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಗೋವಾ ಸರ್ಕಾರ ತಾನು ಖರೀದಿಸಿದ 1 ಲಕ್ಷ ತೆಂಗಿನ ಕಾಯಿಯನ್ನು ರಾಜ್ಯದ ಜನತೆಗೆ ಸಬ್ಸಿಡಿ ದರದಲ್ಲಿ ಪೂರೈಕೆ ಮಾಡಿದೆ.
ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಗೋವಾದಲ್ಲಿ ಹೆಚ್ಚುತ್ತಿದ್ದ ತೆಂಗಿನ ಕಾಯಿ ದರ ನಿಯಂತ್ರಣಕ್ಕಾಗಿ ಮತ್ತು ರಾಜ್ಯದ ಜನತೆಗೆ ಸಬ್ಸಿಡಿ ದರದಲ್ಲಿ ತೆಂಗಿನ ಕಾಯಿ ಪೂರೈಸಲು ಗೋವಾ ರಾಜ್ಯ ಫಲೋತ್ಪಾದನ ಮಹಾಮಂಡಳವು ನೆರೆಯ ರಾಜ್ಯ ಕರ್ನಾಟಕದಿಂದ 1 ಲಕ್ಷ ತೆಂಗಿನ ಕಾಯಿ ತರಿಸಿ ಗೋವಾದಲ್ಲಿ ಜನರಿಗೆ ಸಬ್ಸಿಡಿ ದರದಲ್ಲಿ ಪೂರೈಕೆ ಮಾಡಿದೆ.
ಫಲೋತ್ಪಾದನ ಮಹಾಮಂಡಳವು ಕರ್ನಾಟಕದಿಂದ ತೆಂಗಿನ ಕಾಯಿ ತರಿಸಿ ಗೋವಾದಲ್ಲಿ ಸಬ್ಸಿಡಿ ದರದಲ್ಲಿ ಪೂರೈಕೆ ಮಾಡಿದ್ದರಿಂದ ಗೋವಾದಲ್ಲಿ ತೆಂಗಿನ ಕಾಯಿ ದರ ನಿಯಂತ್ರಣಕ್ಕೆ ಬಂದಿದೆ. ಸದ್ಯ ಗೋವಾ ಮಾರುಕಟ್ಟೆಯಲ್ಲಿ 70 ರೂಗಳಿಗೆ ತಲುಪಿದ್ದ ದೊಡ್ಡ ಗಾತ್ರದ ತೆಂಗಿನ ಕಾಯಿ 50 ರೂಗಳಿಗೆ ಇಳಿಕೆಯಾಗಿದೆ. ಅಂತೆಯೇ ಮಧ್ಯಮ ಗಾತ್ರದ ತೆಂಗಿನ ಕಾಯಿ ರಾಜ್ಯದ ಮಾರುಕಟ್ಟೆಯಲ್ಲಿ 30 ರಿಂದ 35 ರೂಗಳಿಗೆ ಇಳಿಕೆಯಾಗಿದೆ. ಇದರಿಂದಾಗಿ ದಿನನಿತ್ಯ ಬಳಸುವ ತೆಂಗಿನ ಕಾಯಿ ರಾಜ್ಯದಲ್ಲಿ ಜನಸಾಮಾನ್ಯರಿಗೆ ಕೊಂಚ ಕಡಿಮೆ ದರದಲ್ಲಿ ಲಭಿಸುವಂತಾಗಿದೆ.
ಗೋವಾದ ಗಲ್ಲಿ ಗಲ್ಲಿಗಳಲ್ಲಿಯೂ ಇರುವ ಫಲೋತ್ಪಾದನ ಮಹಾಮಂಡಳದ ತರಕಾರಿ ಮಾರಾಟ ಅಂಗಡಿಗಳಲ್ಲಿ ತೆಂಗಿನ ಕಾಯಿ ಸಬ್ಸಿಡಿ ದರದಲ್ಲಿ ಲಭಿಸುವಂತೆ ಮಾಡಲು ಫಲೋತ್ಪಾದನ ಮಹಾಮಂಡಳ ಈ ಎಲ್ಲ ಅಂಗಡಿ ಮಾಲೀಕರ ಸಭೆ ಕರೆದಿದೆ. ಈ ಮೂಲಕವಾಗಿ ರಾಜ್ಯದ ಜನತೆಗೆ ಅಲ್ಲಲ್ಲಿ ಸ್ಥಳೀಯವಾಗಿ ಸಬ್ಸಿಡಿ ದರದಲ್ಲಿ ತೆಂಗಿನ ಕಾಯಿ ಲಭಿಸುವಂತೆ ಮಾಡಲು ಫಲೋತ್ಪಾದನ ಮಹಾಮಂಡಳ ಪ್ರಯತ್ನ ನಡೆಸಿದೆ ಎಂದು ಗೋವಾ ರಾಜ್ಯ ಫಲೋತ್ಪಾದನ ಮಹಾಮಂಡಳದ ವ್ಯವಸ್ಥಾಪಕ ಡಾ. ಚಂದ್ರಹಾಸ ದೇಸಾಯಿ ಮಾಹಿತಿ ನೀಡಿದ್ದಾರೆ.
The Goa government bought 1 lakh coconuts from Karnataka and supplied coconuts at subsidized rates in Goa. On the occasion of Ganesh Chaturthi festival, the Goa government has supplied 1 lakh coconuts to the people of the state at subsidized rates.