ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ-ಬೆಳಗಾವಿ ಸಂಪರ್ಕಿಸುವ ಅನಮೋಡ ಘಾಟ್ ರಸ್ತೆಯಲ್ಲಿ ಭಾರಿ ವಾಹನಗಳ ಓಡಾಟಕ್ಕೆ ಇನ್ನೇನು 10 ದಿನಗಳಲ್ಲಿ ಗ್ರೀನ್ ಸಿಗ್ನಲ್ ಲಭಿಸಲಿದೆ. ಈ ಕುರಿತಂತೆ ಉಪಜಿಲ್ಲಾಧಿಕಾರಿ ನೀಲೇಶ ಧಾಯಗೋಡಕರ್ ರವರು ಸೂಚನೆ ನೀಡಿದ್ದಾರೆ. ಈ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳು ಸಂಬಂಧಿತ ಇಲಾಖೆಗೆ 10 ದಿನಗಳ ಕಾಲಾವಕಾಶ ನೀಡಿದ್ದು, ಈ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಪ್ಟೆಂಬರ್ 15 ರ ಒಳಗೆ ಈ ಮಾರ್ಗದಲ್ಲಿ ಭಾರಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಉಪಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಗೋವಾದ ಅನಮೋಡ ಘಾಟ್ ರಸ್ತೆಯಲ್ಲಿ ಭೂಕುಸಿತವಾದ ಸ್ಥಳದಲ್ಲಿ ರಸ್ತೆ ದುರಸ್ತಿಯ ಹಿನ್ನೆಲೆಯಲ್ಲಿ ಇನ್ನೂ ಎರಡು ತಿಂಗಳುಗಳ ಕಾಲ ಈ ಮಾರ್ಗದಲ್ಲಿ ಭಾರಿ ವಾಹನಗಳ ಓಡಾಟಕ್ಕೆ ನಿಷೇಧ ಹೇರಬೇಕು ಎಂದು ದಕ್ಷಿಣ ಗೋವಾ ಜಿಲ್ಲಾಧಿಕಾರಿಗಳ ಬಳಿಮನವಿ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಉಪಜಿಲ್ಲಾಧಿಕಾರಿ ನೀಲೇಶ ದಾಯಗೋಡಕರ್, ತಹಶೀಲ್ದಾರ ಮನೋಜ ಕೊರಗಾಂವಕರ್, ಲೊಕೋಪಯೋಗಿ ಇಲಾಖೆಯ ಅಧಿಕಾರಿ- ಸತ್ಯೇಂದ್ರ ಬೋಬೆ, ಆನಂದ ವಾಗುರ್ಮೇಕರ್, ಗುತ್ತಿಗೆದಾರ ಅರುಣ ಕುಡಚಡಕರ್, ಟ್ರಾಫಿಕ್ ಪೋಲಿಸ್ ನಿರೀಕ್ಷಕ ಕೃಷ್ಣಾ ಸಿನಾರಿ, ರವರು ಅನಮೋಡ ಘಾಟ್ ನ ಭೂಕುಸಿತವಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತಂತೆ ಉಜಿಲ್ಲಾಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ.
ಅಗತ್ಯವಿರುವ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಬೇಕು, ಅಂತೆಯೇ ಸೂಚನಾ ಫಲಕವನ್ನು ಹಾಕಬೇಕು. ಭೂಕುಸಿತ ಸ್ಥಳದಲ್ಲಿ ಪಕ್ದಲ್ಲಿ ದಿಬ್ಬಗಳನ್ನು ಕತ್ತರಿಸಿ ರಸ್ತೆಯಲ್ಲಿ ವಾಹನ ಸಂಚಾರ ಸುಗಮಗೊಳ್ಳುವಂತೆ ಮಾಡಬೇಕು ಎಂದು ಉಪಜಿಲ್ಲಾಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ. ರಸ್ತೆ ದುರಸ್ತಿ ಕಾಮಗಾರಿಗೆ 10 ದಿನಗಳ ಕಾಲಾವಕಾಶ ನೀಡಿದ್ದು, ಈ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಪ್ಟೆಂಬರ್ 15 ರ ಒಳಗೆ ಈ ಮಾರ್ಗದಲ್ಲಿ ಭಾರಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಉಪಜಿಲ್ಲಾಧಿಕಾರಿಗಳು ಸಂಬಂಧಿತ ಇಲಾಖೆಗೆ ಸೂಚನೆ ನೀಡಿದ್ದಾರೆ.
ಅರಬೈಲ್ ಘಾಟ್ ರಸ್ತೆಯಲ್ಲಿ ಭಾರಿ ವಾಹನಗಳ ಓಡಾಟ..!
ಗೋವಾದಿಂದ ಉತ್ತರಕರ್ನಾಟಕ ಭಾಗಕ್ಕೆ ಸಂಪರ್ಕಿಸುವ ಅನಮೋಡ ಹಾಗೂ ಚೋರ್ಲಾ ಘಾಟ್ ಈ ಎರಡೂ ರಸ್ತೆಗಳಲ್ಲಿ ಸದ್ಯ ಭಾರಿ ವಾಹನಗಳ ಓಡಾಟಕ್ಕೆ ನಿಷೇಧವಿರುವುದರಿಂದ ಗೋವಾದಿಂದ ಕರ್ನಾಟಕಕ್ಕೆ ತೆರಳುವವರು ಅಥವಾ ಕರ್ನಾಟಕದಿಂದ ಗೋವಾಕ್ಕೆ ಬರುವ ಭಾರಿ ವಾಹನಗಳು ಉತ್ತರಕನ್ನಡ ಜಿಲ್ಲೇಯ ಅರಬೈಲ್ ಘಾಟ್ ಮೂಲಕ ಓಡಾಟ ನಡೆಸುತ್ತಿವೆ. ಇದರಿಂದಾಗಿ ಅರಬೈಲ್ ಘಾಟ್ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಇದೀಗ ಅನಮೋಡ ಘಾಟ್ ದುರಸ್ತಿಯಾದರೆ ಅತ್ತ ಅರಬೈಲ್ ಘಾಟ್ ರಸ್ತೆಯಲ್ಲಿ ಭಾರಿ ವಾಹನಗಳ ಓಡಾಟ ಕೊಂಚ ಕಡಿಮೆಯಾಗುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.
The Anamod Ghat road connecting Goa-Belagavi will get a green signal for plying heavy vehicles in the next 10 days. Deputy District Collector Nilesh Dhayagodakar has given instructions in this regard. The District Collector has given 10 days time to the concerned department to complete this road work, and the Sub-District Collector has instructed to complete the work within this period and allow heavy vehicles to ply on this route by September 15.