ಸುದ್ಧಿಕನ್ನಡ ವಾರ್ತೆ
ಪಣಜಿ:ಮನೆಗೆ ಜನರೇಟರ್ ಅಥವಾ ಯುಪಿಎಸ್ ರಿಚಾರ್ಜ(ಇನ್ವರ್ಟರ್) ಬ್ಯಾಟರಿ ಅಳಡಿಸಬೇಕಾದರೆ ಸರ್ಕಾರದಿಂದ ಅನುಮತಿ ಪಡೆಯಲೇಬೇಕು. ಹೌದು ಇಂತಹದ್ದೊಂದು ಜಿಯಮವನ್ನು ಗೋವಾ ಸರ್ಕಾರ ಜಾರಿಗೆ ತಂದಿದೆ.

ಜನರೇಟರ್ ಗಳು ಮತ್ತು ಇನ್ವರ್ಟರ್ ಗಳ ತಾಂತ್ರಿಕ ಕಾರಣಗಳಿಂದಾಗಿ ಅಮಾಯಕ ಲೈನ್ ಮ್ಯಾನ್ ಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಗೋವಾ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಇದರ ಒಂದು ಭಾಗವಾಗಿ ದೊಡ್ಡ ಜನರೇಟರ್ ಗಳು ಮತ್ತು ಇನ್ವರ್ಟರ್ ಗಳನ್ನು ಹೊಂದಿರುವವರು ಕೂಡಲೇ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಬೇಕು. ಮನೆಗೆ ಹೊಸದಾಗಿ ಜನರೇಟರ್ ಅಥವಾ ಇನ್ವರ್ಟರ್ ಅಳವಡಿಸುವವರು ಪೂರ್ವಾನುಮತಿ ಪಡೆದುಕೊಳ್ಳಬೇಕು ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಗೋವಾ ರಾಜ್ಯ ಇಂಧನ ಸಚಿವ ಸುದೀನ ಧವಳೀಕರ್ ಹೇಳಿದ್ದಾರೆ.

ಗೋವಾದ ಪೊಂಡಾದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು-ಮನೆಗೆ ಅಳವಡಿಸಿದ ಇನ್ವರ್ಟರ್ ಮತ್ತು ಜನರೇಟರ್ ಕಾರಣದಿಂದಾಗಿ ಲೈನ್ ಮ್ಯಾನ್ ಗಳು ಕೆಲಸ ಮಾಡುವಾಗ ವಿದ್ಯುತ್ ಹರಿದು ಸಾವನ್ನಪ್ಪಿರುವ ಹಲವು ಘಟನೆಗಳು ನಡೆದಿದೆ. ಲೈನ್ ಮ್ಯಾನ್ ಗಳು ಕೆಲಸ ಮಾಡುವಾಗ ರಿವರ್ಸ ಕರೆಂಟ್ ಬಂದು ಇಂತಹ ಘಟನೆ ನಡೆದಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಈ ವಿಷಯದಲ್ಲಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ ಎಂದು ಧವಳೀಕರ್ ಮಾಹಿತಿ ನೀಡಿದರು.

ಇದರಿಂದಾಗಿ ಗೋವಾದಲ್ಲಿ ಇನ್ನು ಮುಂದೆ ಮನೆಗಳಲ್ಲಿ ಇನ್ವರ್ಟರ್ ಅಥವಾ ಜನರೇಟರ್ ಅಳವಡಿಸಬೇಕಾದರೆ ಜನರು ಸರ್ಕಾರದ ಅನುಮತಿ ಪಡೆದುಕೊಂಡಿರುವುದು ಖಡ್ಡಾಯವಾಗಿದೆ. ಇಲ್ಲವಾದಲ್ಲಿ ಕಠಿಣ ಕ್ರಮಕ್ಕೆ ಗುರಿಯಾಗುವುದು ಖಂಡಿತ.