ಸುದ್ಧಿಕನ್ನಡ ವಾರ್ತೆ
ಪಣಜಿ: ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಗೋವಾ ರಾಜ್ಯ ಫಲೋತ್ಪಾದನ ಮಹಾಮಂಡಳವು ಗೋವಾ ರಾಜ್ಯದ ಜನತೆಗೆ ಕರ್ನಾಟಕದಿಂದ ತರಿಸಿದ ತೆಂಗಿನ ಕಾಯಿಯನ್ನು ಸಬ್ಸಿಡಿ ದರದಲ್ಲಿ ರಾಜ್ಯದ ಜನತೆಗೆ ವಿತರಣೆ ಮಾಡಿದೆ. ಕಳೆದ 12 ದಿನಗಳಲ್ಲಿ ರಾಜ್ಯಕ್ಕೆ ತರಿಸಲಾದ 75,000 ತೆಂಗಿನ ಕಾಯಿಯನ್ನು ಕಡಿಮೆ ದರವದಲ್ಲಿ ರಾಜ್ಯದ ಜನತೆಗೆ ವಿತರಿಸಲಾಗಿದೆ.
ಗೋವಾ ರಾಜ್ಯ ಫಲೋತ್ಪಾದನ ಮಹಾಮಂಡಳದ ಅಧ್ಯಕ್ಷ ಪ್ರೆಮೇಂದ್ರ ಶೇಟ್ ರವರು ಸುದ್ಧಿಗಾರರಿಗೆ ಮಾಹಿತಿ ನೀಡಿ- ಗೋವಾ ರಾಜ್ಯದಲ್ಲಿ ತೆಂಗಿನ ಕಾಯಿ ದರ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ದಿನಗಳಲ್ಲಿಯೂ ಮಹಾಮಂಡಳದ ವತಿಯಿಂದ ಗೋವಾ ರಾಜ್ಯದ ಜನತೆಗೆ ಕಡಿಮೆ ದರದಲ್ಲಿ ತೆಂಗಿನಕಾಯಿ ಲಭಿಸುವಂತೆ ಮಾಡಲಾಗುವುದು. ಗಣೇಶ ಚತುರ್ಥಿಯ ಸಂದರ್ಭದಲ್ಲಿ ತೆಂಗಿನ ಕಾಯಿ ದರ ಹೆಚ್ಚಳದ ಪರಿಣಾಮ ರಾಜ್ಯದ ಜನತೆಯ ಮೇಲೆ ಆಗಬಾರದು ಎಂಬ ಉದ್ದೇಶದಿಂದ ನೆರೆಯ ರಾಜ್ಯದಿಂದ ತೆಂಗಿನ ಕಾಯಿ ಖರೀದಿಸಿ ಗೋವಾ ರಾಜ್ಯದ ಜನತೆಗೆ ಲಭಿಸುವಂತೆ ಮಾಡುವ ನಿರ್ಣಯ ತೆಗೆದುಕೊಳ್ಳಲಾಯಿತು. ಇದರಂತೆಯೇ ಕಳೆದ 12 ದಿನಗಳಲ್ಲಿ ಗೋವಾ ರಾಜ್ಯದಲ್ಲಿ ಸಬ್ಸಿಡಿ ದರದಲ್ಲಿ 75,000 ತೆಂಗಿನ ಕಾಯಿ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ನೀಡಿದರು.
ಕಡಿಮೆ ದರದಲ್ಲಿ ತೆಂಗಿನ ಕಾಯಿ ರಾಜ್ಯದ ಜನತೆಗೆ ಲಭಿಸುವಂತೆ ಮಾಡುವ ಕಾರ್ಯವನ್ನು ಫಲೋತ್ಪಾದನ ಮಹಾಮಂಡಳ ಮುಂದುವರೆಸಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಗೋವಾ ರಾಜ್ಯದಲ್ಲಿ ಪ್ರತಿದಿ ಲಕ್ಷಾಂತರ ತೆಂಗಿನ ಕಾಯಿ ಅಗತ್ಯವಿದೆ. ಇದರಿಂದಾಗಿ ಗೋವಾದಲ್ಲಿ ಸರ್ಕಾರವು ಸಬ್ಸಿಡಿ ದರದಲ್ಲಿ ತೆಂಗಿನ ಕಾಯಿ ರಾಜ್ಯದ ಜನತೆಗೆ ಲಭಿಸುವಂತೆ ಮಾಡಿದರೆ ಇದರಿಂದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಪ್ರೆಮೇಂದ್ರ ಶೇಟ್ ಅಭಿಪ್ರಾಯಪಟ್ಟರು.