ಸುದ್ಧಿಕನ್ನಡ ವಾರ್ತೆ
ಗೋವಾ ರಾಜ್ಯವು ದೈನಂದಿನ ಅಗತ್ಯತೆಗಳಿಗೆ ಬಹುಮುಖ್ಯವಾಗಿ ನೆರೆಯ ರಾಜ್ಯ ಕರ್ನಾಟಕವನ್ನೇ ಅವಲಂಭಿಸಿದೆ. ದೈನಂದಿನ ಅಗತ್ಯತೆಗಳಲ್ಲಿ ಪ್ರಮುಖವಾಗಿರುವ ತೆಂಗಿನ ಕಾಯಿ ಕೂಡ ಗೋವಾ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಗೋವಾದಲ್ಲಿ ತೆಂಗಿನ ಕಾಯಿ ದರ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಗೋವಾ ಸರ್ಕಾರವು ಗಣೇ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಗೋವಾ ರಾಜ್ಯದ ಜನತೆಗೆ ಸಬ್ಸಿಡೆಇ ದರದಲ್ಲಿ ತೆಂಗಿನ ಕಾಯಿ ಪೂರೈಸಲು ನಿರ್ಧರಿಸಿತ್ತು. ಇದಕ್ಕಾಗಿ ಗೋವಾ ಸರ್ಕಾರವು ಕರ್ನಾಟಕದಿಂದ 1 ಲಕ್ಷ ತೆಂಗಿನಕಾಯಿಯನ್ನು ಖರೀದಿ ಮಾಡಿತ್ತು. ಆದರೆ ಈ ತೆಂಗಿನ ಕಾಯಿ ಎಲ್ಲಿ ಹೋಯಿತು…? ಎಂಬುದೇ ಪ್ರಶ್ನೆಯಾಗಿ ಉಳಿದಿದೆ.
ಗೋವಾ ರಾಜ್ಯದಲ್ಲಿ ಸದ್ಯ ಪ್ರತಿ ದೊಡ್ಡ ಗಾತ್ರದ ತೆಂಗಿನ ಕಾಯಿಯನ್ನು 70 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ರಾಜ್ಯದ ಜನತೆಗೆ ಈ ಹೆಚ್ಚಿನ ದರ ಕೊಟ್ಟು ತೆಂಗಿನ ಕಾಯಿ ಖರೀದಿಸುವುದು ಕಷ್ಟವಾಗಲಿದೆ ಎಂಬ ಕಾರಣಕ್ಕೆ ಗೋವಾ ರಾಜ್ಯ ಸರ್ಕಾರವು ಕರ್ನಾಟಕದಿಂದ 1 ಲಕ್ಷ ತೆಂಗಿನ ಕಾಯಿ ಖರೀದಿಸಿ ವಾಹನಗಳ ಮೂಲಕ ಮನೆ ಮನೆಗೆ ತಲುಪಿಸುವುದಾಗಿ ಹೇಳಿತ್ತು. ಸರ್ಕಾರವು ಕರ್ನಾಟಕದಿಂದ ಖರೀದಿಸಿದ ತೆಂಗಿನ ಕಾಯಿಯನ್ನು ಸಬ್ಸಿಡಿ ದರದಲ್ಲಿ 45 ರೂಗಳಿಗೆ ನೀಡುವುದಾಗಿ ಹೇಳಿತ್ತು. ಗಣೇಶ ಚತುರ್ಥಿ ಹಬ್ಬ ಮುಗಿದರೂ ಕೂಡ ಗೋವಾ ಸರ್ಕಾರ ಖರೀದಿಸಿದ ತೆಂಗಿನ ಕಾಯಿ ಮಾತ್ರ ಪತ್ತೆಯೇ ಇಲ್ಲ. ಯಾರನ್ನೂ ಕೇಳಿದರೂ ಕೂಡ ಸರ್ಕಾರದ ತೆಂಗಿನ ಕಾಯಿ ನಮಗೆ ಲಭಿಸಿಲ್ಲ ಎಂದೇ ಹೇಳುತ್ತಿದ್ದಾರೆ. ಹಾಗಿದ್ದರೆ ಕರ್ನಾಟಕದಿಂದ ಖರೀದಿಸಿದ 1 ಲಕ್ಷ ತೆಂಗಿನ ಕಾಯಿಯನ್ನು ಗೋವಾ ಸರ್ಕಾರ ಯಾರಿಗೆ ನೀಡಿದೆ…? ಎಂಬುದೇ ಇದೀಗ ಪ್ರಶ್ನೆಯಾಗಿದೆ.
ಗೋವಾ ಸರ್ಕಾರ ನೇರವಾಗಿ ಕರ್ನಾಟಕದಿಂದ ಖರೀದಿ ಮಡಿರುವ ತೆಂಗಿನ ಕಾಯಿಯನ್ನು ಹೊರತು ಪಡಿಸಿ ಇಲ್ಲಿನ ವ್ಯಾಪಾರಸ್ಥರೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕರ್ನಾಟಕದಿಂದಲೇ ತೆಂಗಿನ ಕಾಯಿಯನ್ನು ಖರೀದಿ ಮಾಡಿದ್ದಾರೆ. ಇಷ್ಟೇ ಅಲ್ಲದೆಯೇ ಕರ್ನಾಟಕದಿಂದ ಗೋವಾಕ್ಕೆ ಗಣೇಶ ಚತುರ್ಥಿಗೆ ಫಲಾವಳಿಗೆ ಬೇಕಾಗುವ ಎಲ್ಲ ಬಗೆಯ ತರಕಾರಿ,ಹಣ್ಣುಗಳು ಕರ್ನಾಟಕದಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಬಂದಿದೆ. ಪ್ರಮುಖವಾಗಿ ಉತ್ತರಕನ್ನಡ ಜಿಲ್ಲೆಯಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಬಾಳೆ ಎಲೆಯನ್ನೂ ಗೋವಾಕ್ಕೆ ಪೂರೈಸಲಾಗಿದೆ. ಗೋವಾದಲ್ಲಿ ಚತುರ್ಥಿಯ ಸಂದರ್ಭದಲ್ಲಿ ಒಂದು ಬಾಳೆ ಎಲೆಗೆ 20 ರೂಗಳಂತೆ ಮಾರಾಟ ಮಾಡಲಾಗಿದೆ. ಹೀಗೆ ಗೋವಾದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಇಲ್ಲಿ ಬೇಡಿಕೆ ಹೆಚ್ಚಾಗಿರುವುದೇ ಕಾರಣವಾಗಿದೆ.
ಅಂತೆಯೇ ತೆಂಗಿನ ಕಾಯಿ ಕೂಡ ಗೋವಾದಲ್ಲಿ ಹೆಚ್ಚಿನ ಬೇಡಿಕೆಯಿದೆ. ಇದರಿಂದಾಗಿ ತೆಂಗಿಕಾಯಿ ದರ ಏರುತ್ತಲೇ ಇದೆ. ಇದೀಗ ಪ್ರತಿ ಕಾಯಿಗೆ 70 ರೂ ಗಳಂತೆ ಮಾರಾಟ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ಈ ದರ 100 ರೂಗಳಿಗೆ ತಲುಪುವ ಸಾಧ್ಯತೆಯಿದೆ ಎಂದು ತೆಂಗಿನ ಕಾಯಿ ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಗೋವಾ ಸರ್ಕಾರ ಹಬ್ಬಕ್ಕೆ ಕರ್ನಾಟಕದಿಂದ ತೆಂಗಿನ ಕಾಯಿ ತಂದು ಗೋವಾದಲ್ಲಿ ಸಬ್ಸಿಡಿ ದರದಲ್ಲಿ ತೆಂಗಿನ ಕಾಯಿ ಪೂರೈಸಲಿದೆ ಎಂದು ಕಾದು ಕುಳಿತ ಗೋವಾದ ಜನತೆಗೆ ನಿರಾಸೆಯಾಗಿದ್ದು, ಹೆಚ್ಚಿನ ದರ ನೀಡಿ ತೆಂಗಿನ ಕಾಯಿ ಖರೀದಿಸಿದ್ದಾರೆ.
The state of Goa is largely dependent on the neighboring state of Karnataka for its daily needs. Coconuts, an important part of daily needs, are also supplied in large quantities to the state of Goa. Keeping in mind the increase in coconut prices in Goa in recent times, Goa government has decided to supply coconuts at subsidized rate to the people of Goa state during Gane Chaturthi festival. For this, the Goa government had purchased 1 lakh coconuts from Karnataka. But where did this coconut go…? The question remains.