ಸುದ್ಧಿಕನ್ನಡ ವಾರ್ತೆ
ಪಣಜಿ: ಈದ್-ಎ-ಮಿಲಾದ್ ದಿನ ಆಯೋಜಿಸುವ ಜುಲೂಸ್ ಗೆ ಗೋವಾ ಬಜರಂಗ ದಳ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಗೋವಾದಲ್ಲಿ ಒಂದುವೇಳೆ ಜುಲೂಸ್ ಗೆ ಪರವಾನಗಿ ನೀಡಿದರೆ ಖಾಯ್ದೆ ಸುವ್ಯವಸ್ಥೆಯ ಪ್ರಶ್ನೆ ನಿರ್ಮಾಣವಾಗಲಿದೆ, ಇದಕ್ಕೆ ನಾವು ಜವಾಬ್ದಾರರಲ್ಲ ಎಂದು ಬಜರಂಗದಳದ ಗೋವಾ ವಿಭಾಗದ ಸಂಯೋಜನ ವಿರಾಜ್ ದೇಸಾಯಿ ಸರ್ಕಾರವನ್ನು ಎಚ್ಚರಿಸಿದ್ದಾರೆ.

ನಾವು ಇಂತಹ ಮೆರವಣಿಗೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ, ಮುಸ್ಲಿಂರ ಜುಲೂಸ್ ನಡೆಸಲು ನಾವು ಬಿಡುವುದಿಲ್ಲ. ಕೆಲವು ಇಂತಹ ಗುಂಪು ಶಕ್ತಿಪ್ರದರ್ಶನ ನಡೆಸಲು ಮುಂದಾಗುತ್ತದೆ. ಈ ಹಿಂದೆ ಕೂಡ ಗೋವಾದ ಕಾಣಕೋಣದಲ್ಲಿ ಇದೇ ರೀತಿಯ ಪ್ರಕರಣ ನಡೆದಿತ್ತು ಎಂದು ವಿರಾಜ್ ದೇಸಾಯಿ ಸ್ಪಷ್ಟಪಡಿಸಿದ್ದಾರೆ.
ಯವುದೇ ಒಂದು ಹಬ್ಬ ಉತ್ಸವವನ್ನು ತಮ್ಮ ಧರ್ಮಸ್ಥಳದಲ್ಲಿ ಅಥವಾ ತಮ್ಮ ಮನೆಯಲ್ಲಿ ಆಯೋಜಿಸಬೇಕು. ಈರೀತಿ ಹಬ್ಬ ಆಚರಿಸಿದರೆ ಯಾವುದೇ ತೊಂದರೆ ಬರುವುದಿಲ್ಲ. ಮುಸ್ಲಿಂಮರ ಜುಲೂಸ್ ಮೆರವಣಿಗೆ ನಡೆಸಿ ಖಾಯ್ದೆ ಸುವ್ಯವಸ್ಥೆಯ ಪ್‍ರನೆ ನಿರ್ಮಾಣವಾದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಹಿಂದೂ ಸಮಾಜದ ಹಿತಕ್ಕಾಗಿ ನಾವು ಶಾಂತತೆ ಹಾಗೂ ಸುವ್ಯವಸ್ಥೆ ಕಾಯ್ದುಕೊಳ್ಳಲು ಬದ್ಧರಾಗಿದ್ದೇವೆ, ಆದರೆ ಇಂತಹ ಆಚರಣೆಗಳಿಗೆ ಎಂದೂ ಪರವಾನಗಿ ನೀಡಬಾರದು ಎಂದು ಬಜರಂಗ ದಳದ ಗೋವಾ ವಿಭಾಗದ ಸಂಯೋಜಕ ವಿರಾಜ್ ದೇಸಾಯಿ ಎಚ್ಚರಿಸಿದ್ದಾರೆ.


Goa Bajrang Dal has strongly objected to Zulus organizing Eid-e-Milad day. Viraj Desai, convenor of Bajrang Dal’s Goa unit, has warned the government that if Zulus are given a license in Goa, law and order will be a problem, for which we are not responsible.