ಸುದ್ಧಿಕನ್ನಡ ವಾರ್ತೆ
ಪಣಜಿ: ಹೊರನಾಡ ಕನ್ನಡಿಗರ ಸಮಸ್ಯೆ ಪರಿಹರಿಸಲು ಕರ್ನಾಟಕ ಸರ್ಕಾರವು ವಿಶೇಷ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿದೆ. ಇದರಿಂದಾಗಿ ಗೋವಾದಲ್ಲಿ ಕನ್ನಡಿಗರ ಸಮಸ್ಯೆಯನ್ನು ನೇರವಾಗಿ ಮನವಿ ಸಲ್ಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ್ ಹಾಗೂ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ರವರು ಕರ್ನಾಟಕ ಸರ್ಕಾರಕ್ಕೆ ಈ ಕುರಿತು ಮನವಿ ಮಾಡಿದ್ದರು. ಈ ಮನವಿ ಫಲವಾಗಿ ಹೊರನಾಡ ಕನ್ನಡಿಗರ ಸಮಸ್ಯೆ ಆಲಿಸಲು ವಿಶೇಷ ನೋಡಲ್ ಅಧಿಕಾರಿಗಳು ನೇಮಕಗೊಂಡಿದ್ದಾರೆ.

ಗಡಿ ಕನ್ನಡಿಗರ ಸಮಸ್ಯೆ ಬಗ್ಗೆ ಹಾಗೂ ಗಡಿ ಭಾಗದ ಸಮಗ್ರ ಅಭಿವೃದ್ಧಿಗೆ ಮತ್ತು ಹೊರನಾಡಿನ ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಲು ಸಮನ್ವಯ ಸಾಧಿಸಲು ಅನುಕೂಲವಾಗುವಂತೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ ಇಲಾಖೆಯಿಂದ ವಿಶೇಷ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಹೊರ ನಾಡ ಕನ್ನಡಿಗರು ಇವರನ್ನು ನೇರವಾಗಿ ಸಂಪರ್ಕಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಗೋವಾದಲ್ಲಿ ಕನ್ನಡಿಗರ ಮಕ್ಕಳು ಶಾಲೆಗಳಲ್ಲಿ ಜಾತಿ ಪ್ರಮಾಣ ಪತ್ರ ಲಭಿಸದ ಕಾರಣ ಗೋವಾದಲ್ಲಿ ಕನ್ನಡಿಗರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಉನ್ನತ ಶಿಕ್ಷಣದಿಂದ ಹಾಗೂ ಹಲವರು ಉದ್ಯೋಗದಿಂದಲೂ ವಂಚಿತರಾಗಿದ್ದಾರೆ. ಇಷ್ಟೇ ಅಲ್ಲದೆಯೇ ಗೋವಾದಲ್ಲಿ ಸ್ಥಳೀಯ ನಿವಾಸಿಗಳಲ್ಲದವರಿಗೆ ಗೋವಾದ ಪ್ರಸಿದ್ಧ ಗೋವಾ ಮೆಡಿಕಲ್ ಕಾಲೆಜು ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ಸೌಲಭ್ಯವಿಲ್ಲ. ಇಷ್ಟೇ ಅಲ್ಲದೆಯೇ ಗೋವಾದ ಕನ್ನಡ ಶಾಲೆಗಳಲ್ಲಿಯೂ ಕೂಡ ಹಲವು ಕುಂದು ಕೊರತೆಗಳಿವೆ. ಇಷ್ಟೇ ಅಲ್ಲದೆಯೇ ಗೋವಾದಲ್ಲಿ ಕನ್ನಡಿಗರು ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಎಲ್ಲ ಸಮಸ್ಯೆಗಳು ಹೊಸದಾಗಿ ನೇಮಕಗೊಂಡ ನೋಡಲ್ ಅಧಿಕಾರಿಗಳ ಮೂಲಕವಾಗಿ ಪರಿಹಾರ ಲಭಿಸಲಿ ಎಂಬ ಆಶಯ ಗೋವಾ ಕನ್ನಡಿಗರದ್ದಾಗಿದೆ.

ಹೊರನಾಡ ಕನ್ನಡಿಗರ ಸಮಸ್ಯೆಯನ್ನು ಆಲಿಸಲು ಸರ್ಕಾರದ ಅಧೀನ ಕಾರ್ಯದರ್ಶಿಯಾನಿ (ನೋಡಲ್ ಅಧಿಕಾರಿ) ಎಸ್.ಎಜಾಸ್ ಪಾಷ ರವರು ನಿಯುಕ್ತಿಗೊಂಡಿದ್ದಾರೆ. ಹೊರ ನಾಡ ಕನ್ನಡಿಗರ ಯಾವುದೇ ಸಮಸ್ಯೆಗೆ ಇವರ ದೂರವಾಣಿ ಸಂಖ್ಯೆ -9845142886 ನ್ನು ಸಂಪರ್ಕಿಸಬಹುದಾಗಿದೆ. ಅಂತೆಯೇ ಉಪ ನಿರ್ದೇಶಕರಾಗಿ (ನೋಡಲ್ ಅಧಿಕಾರಿ) ಶ್ರೀಮತಿ ಭವ್ಯ ಕೆ.ಆರ್ ರವರು ನಿಯುಕ್ತಿಗೊಂಡಿದ್ದಾರೆ. ಇವರ ದೂರವಾಣಿ ಸಂಖ್ಯೆ-9448743489 ರವರನ್ನು ಕೂಡ ಸಂಪರ್ಕಿಸಬಹುದಾಗಿದೆ.