ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಒಂದು ಪ್ರಸಿದ್ಧ ಪ್ರವಾಸಿ ತಾಣ. ಆದರೆ ಇಲ್ಲಿ ಕೇವಲ ಪ್ರವಾಸಿ ಪ್ರಸಿದ್ಧ ಸ್ಥಳಗಳು ಮಾತ್ರವಲ್ಲದೆಯೇ ಧಾರ್ಮಿಕ ಸ್ಥಳಗಳು, ಆಚರಣೆಗಳೂ ಕೂಡ ಅಷ್ಟೇ ಮಹತ್ವ ಮತ್ತು ಪ್ರಸಿದ್ಧಿ ಪಡೆದಿದೆ. ಇಂತಹ ಒಂದು ಪ್ರಮುಖ ಸ್ಥಳವೆಂದರೆ ಗೋವಾದ ನಾರ್ವೆಯ ಪಂಚ ನದಿಗಳ ಸಂಗಮ ತೀರದಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ.
ಗೋವಾದ ದ್ವೀಪವೊಂದರಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಠಮಿ ಜಾತ್ರೆಯು ಗೋವಾ ರಾಜ್ಯಾದ್ಯಂತ ಮಾತ್ರವಲ್ಲದೆಯೇ ನೆರೆಯ ರಾಜ್ಯಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ. ಗೋವಾದ ಪಣಜಿ ಸಮೀಪದ ನಾರ್ವೆಯ ಪಂಚ ಗಂಗಾ ನದಿ ತೀರದಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು. ಈ ಜಾತ್ರೆಗೆ ಭೂತಾಂಚೆ ಜಾತ್ರೆ ಎಂದೂ ಕರೆಯುತ್ತಾರೆ. ಗೋವಾದಲ್ಲಿ ವಿಶಿಷ್ಠ ಪದ್ಧತಿಗಳಿಂದ ಕೂಡಿದ ಜಾತ್ರೆ ಇದಾಗಿದ್ದು, ಜಾತ್ರೆಯ ವೈಶಿಷ್ಠ್ಯಗಳನ್ನು ತಿಳಿದುಕೊಳ್ಳೋಣ.
ಗೋವಾದ ಪಂಚಗಂಗಾ ನದಿ ತೀರದಲ್ಲಿ ಶ್ರೀಕೃಷ್ಠ ಜನ್ಮಾಷ್ಠಮಿಯ ಅಂಗವಾಗಿ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಗೋವಾದ ನಾರ್ವೆಯಲ್ಲಿ ಪ್ರತಿ ವರ್ಷವೂ ಕೂಡ ಕೃಷ್ಣಾಷ್ಠಮಿಯ ಜಾತ್ರೆ ನೆರೆಯುತ್ತದೆ. ಈ ಜಾತ್ರೆಯಂದು ಸಂಜೆಯ ಸೂರ್ಯಾಸ್ತದ ಒಳಗೆ ಇಲ್ಲಿಂದ ಎಲ್ಲ ಭಕ್ತಾದಿಗಳೂ ನಿರ್ಗಮಿಸುತ್ತಾರೆ. ಸೂರ್ಯಾಸ್ತದ ನಂತರ ಇಲ್ಲಿ ಸತ್ತ ಆತ್ಮಗಳು ಹಬ್ಬದ ಉಳಿದ ಭಾಗವನ್ನು ಆಚರಿಸಲು ಇಲ್ಲಿ ಸೇರುತ್ತಾರೆ ಎಂಬ ನಂಬಿಕೆಯಿದೆ.
ಕಳೆದ ಶುಕ್ರವಾರ ಗೋವಾದ ನಾರ್ವೆಯ ಪಂಚ ನದಿಗಳಾದ ಖಾಂಡೆಪಾರ್,ಬಿಚೋಲಿಮ್,ವಾಳವಂಟಿ, ಮಹದಾಯಿ, ರಗ್ಡಾ ಎಂದು ಐದು ನದಿಗಳ ಪವಿತ್ರ ಸಂಗಮದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಗುತ್ತದೆ. ಇಲ್ಲಿ ಪವಿತ್ರ ಸಂಗಮ ತೀರದಲ್ಲಿ ಸ್ನಾನಮಾಡಿ ನದಿ ದಡದಲ್ಲಿ ಪಿತೃಶ್ರಾದ್ಧ ಆಚರಿಸುವ ಪದ್ಧತಿಯಿದೆ.
ಈ ಜಾತ್ರೆಗೆ ವಿವಿಧ ದೇವಾಲಯಗಳಿಂದ ಪಲ್ಲಕ್ಕಿಗಳು ಶಾಗಮಿಸುತ್ತವೆ. ಇಲ್ಲಿ ಆಗಮಿಸಿದ ಭಕ್ತಾದಿಗಳು ಪಲ್ಲಕ್ಕಿಯಲ್ಲಿ ದೇವರುಗಳ ಪೂಜೆ ನೆರವೇರಿಸುತ್ತಾರೆ. ನಂತರ ಮಸಣದೇವಿಯ ಸ್ಥಳಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸುವ ಪದ್ಧತಿಯಿದೆ.
ಈ ಪಂಚ ನದಿ ತೀರದಲ್ಲಿ ಗೋವಾ ರಾಜ್ಯದಲ್ಲಿ ಮಾತ್ರವಲ್ಲದೆಯೇ ನೆರೆಯ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿಯೂ ಪ್ರಸಿದ್ಧಿ ಪಡೆದಿದ್ದು ಜಾತ್ರೆಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಕಳೆದ ಶುಕ್ರವಾರ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಜಾತ್ರೆಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದರು. ಪ್ರತಿ ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಒಮ್ಮೆಯಾದರೂ ಭೇಟಿ ನೀಡಿ. ಇಲ್ಲಿನ ನಿಸರ್ಗ ಸೌಂದರ್ಯ, ದೇವತೆಗಳ ವಿಶಿಷ್ಠ ಆರಾಧನೆ, ಪದ್ಧತಿಗಳು, ನದಿ ಸಂಗಮ ತೀರ ನಿಮ್ಮನ್ನು ಮತ್ತೆ ಮತ್ತೆ ಆಗಮಿಸುವಂತೆ ಪ್ರೇರೇಪಿಸುವುದಂತೂ ನಿಜ.