ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾಕ್ಕೆ ಬರುವ ಹೊರ ರಾಜ್ಯಗಳ ಕಾರ್ಮಿಕರನ್ನು ರೈಲೆ ಪೋಲಿಸರು ತಪಾಣೆ ನಡೆಸಿದ್ದಾರೆ. ಈಗಾಗಲೇ ಗೋವಾಕ್ಕೆ ಬಂದ 1104 ಕಾರ್ಮಿಕರ ತಪಾಸಣೆ ನಡೆಸಲಾಯಿತು. ಜುಲೈ 29 ರ ವರೆಗೆ ಈ ತಪಾಸಣೆ ನಡೆಸಲಾಗಿತ್ತು ಎಂದು ಕೊಂಕಣ ರೈಲ್ವೆ ಪೋಲಿ ಠಾಣೆಯ ಅಧೀಕ್ಷಕ ಹರೀಶ್ ಮಡಕಯಿಕರ್ ಮಾಹಿತಿ ನೀಡಿದ್ದಾರೆ.
ಪೋಲಿಸ್ ನಿರೀಕ್ಷಕ ರಾಹುಲ್ ನಾಯ್ಕ ರವರ ನೇತೃತ್ವದಲ್ಲಿ ಮಡಗಾಂವ ರೈಲ್ವೆ ನಿಲ್ದಾಣಕ್ಕೆ ಬಂದಿಳಿಯುವ ಹೊರ ರಾಜ್ಯಗಳ ಕಾರ್ಮಿಕರ ತಪಾಸಣೆ ನಡೆಸಲಾಗಿತ್ತು. ಈ ಕಾರ್ಮಿಕರ ಮೂಲ ಊರಿನ ವಿಳಾಸ, ಹಾಗೆಯೇ ಗೋವಾದಲ್ಲಿ ಅವರು ಎಲ್ಲಿ ವಾದ್ತವ್ಯ ಹೂಡಲಿದ್ದಾರೆ…?ಹಾಗೂ ಎಲ್ಲಿ ಕೆಲಸ ಮಾಡುತ್ತಾರೆ.,,ಎಂಬಿತ್ಯಾದಿ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ.
ಸುರಕ್ಷತೆಯ ದೃಷ್ಠಿಯಿಂದ ಗೋವಾಕ್ಕೆ ಬರುವ ಹೊರ ರಾಜ್ಯಗಳ ಕಾರ್ಮಿಕರ ತಪಾಸಣೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಗೋವಾದ ಸುರಕ್ಷತೆಯ ದೃಷ್ಠಿಯಿಂದ ಈ ಕಾರ್ಯಾಚರಣೆಯನ್ನು ಮುಂದುವರೆಸಲಾಗುವುದು ಎಂದು ಪೋಲಿಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗೋವಾದಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಬರುವ ಕೂಲಿ ಕಾರ್ಮಿಕರ ಅಗತ್ಯ ದಾಖಲಾತಿ ಪಡೆದು ತಪಾಸಣೆ ನಡೆಸಲಾಗುತ್ತಿದೆ. ಗೋವಾದಲ್ಲಿ ಬಾಡಿಗೆ ಮನೆಯಲ್ಲಿರುವ ಹೊರ ರಾಜ್ಯದ ಜನರ ದಾಖಲಾತಿಯನ್ನೂ ಪಡೆದುಕೊಳ್ಳಲಾಗುತ್ತಿದೆ.