ಸುದ್ಧಿಕನ್ನಡ ವಾರ್ತೆ
Goa: ಅಯ್ಯೋ ದೇವ್ರೇ.. ಮತ್ತೆ ಮಳೆನಾ,,,? ಹೌದು ಹಾಗಂತ ಎಲ್ಲರೂ ಬೆಚ್ಚಿ ಬೀಳುವಂತಾಗಿದೆ. ಗೋವಾದಲ್ಲಿ ಅಕ್ಟೋಬರ್ 1 ರಿಂದ ಮತ್ತೆ ಮಳೆ ಆರಂಭಗೊಳ್ಳಿದೆ ಅಂತ ಗೋವಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 1 ರಂದು ಗೋವಾದಲ್ಲಿ ಯಲ್ಲೋ ಅಲರ್ಟ ಜಾರಿಗೊಳಿಸಲಾಗಿದೆ.
ಮುಂದಿನ 48 ಗಂಟೆ ಗೋವಾ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ತಾಪಮಾನ 33 ಡಿಗ್ರಿಯಷ್ಟು ಇರಲಿದೆ. ಗೋವಾದಲ್ಲಿ ಅಕ್ಟೋಬರ್ ಮೊದಲ 15 ದಿನಗಳಲ್ಲಿ ಮಳೆ ಸಕ್ರೀಯಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಅಕ್ಟೋಬರ್ 1 ರಂದು ಗೋವಾದಲ್ಲಿ ಹೆಚ್ಚಿನ ಮಳೆಯಾಗಲಿರುವ ನಿರೀಕ್ಷೆಯ ಹಿನ್ನೆಲೆಯಲ್ಲಿ ರಾಜ್ಯ ಹವಾಮಾನ ಇಲಾಖೆ ಯಲ್ಲೋ ಅಲರ್ಟ ಘೋಷಿಸಿದೆ.
ಗೋವಾದಲ್ಲಿ ಪ್ರತಿ ವರ್ಷಕ್ಕಿಂತ ಪ್ರಸಕ್ತ ವರ್ಷ ಅತೀ ಹೆಚ್ಚು ಮಳೆ ದಾಖಲಾಗಿದೆ. ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ರೈತರು ಕೂಡ ಹೆಚ್ಚಿನ ನಷ್ಟ ಅನುಭವಿಸಿದ್ದಾರೆ. ಆದರೆ ಇದೀಗ ಮತ್ತೆ ಮಳೆ ಆರಂಭಗೊಂಡರೆ ಮತ್ತೆ ಏನೇನು ಅವಾಂತರ ಸೃಷ್ಠಿಸಲಿದೆಯೋ ಎಂಬ ಆತಂಕ ರಾಜ್ಯದ ಜನತೆಯಲ್ಲಿ ಮನೆ ಮಾಡಿದೆ.