ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅನಧೀಕೃತ ರೀತಿಯಲ್ಲಿ ರೈಲ್ವೆ ಚೈನ್ ಎಳೆದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮೂಲದ ಹುಲಿಗಯ್ಯಾ ಎಂಬ ರೈಲ್ವೆ ಪ್ರಯಾಣಿಕರಿಗೆ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದೆ.

ಗೋವಾದ ಸಾಂಗೆ ನ್ಯಾಯಾಲಯವು ಸಾದರಪಡಿಸಿದ ಆರೋಪಪತ್ರದ ಅನುಸಾರ- 18048 ಕ್ರಮಾಂಕದ ರೈಲ್ವೆ ಚೈನ್ ಎಳೆದ ಘಟನೆ 27 ಜುಲೈ 2025 ರಂದು ಬೆಳಿಗ್ಗೆ 9.30 ಕ್ಕೆ ನಡೆದಿತ್ತು.

ಈ ರೀತಿ ಅನಧೀಕೃತವಾಗಿ ರೈಲ್ವೆ ಚೈನ್ ಎಳೆದಿದ್ದರಿಂದ ಆರೋಪಿಯು ರೈಲ್ವೆ ಕಾಯ್ದೆ 1989 ರ 141 ಹಾಗೂ 147 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಗೆ 700 ರೂ ದಂಡ ವಿಧಿಸಿದೆ. ದಂಡವನ್ನು ಭರಿಸದೆಯೇ ಇದ್ದಲ್ಲಿ 1 ದಿನದ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.