ಸುದ್ಧಿಕನ್ನಡ ವಾರ್ತೆ
ಗೋವಾದಲ್ಲಿ ಕನ್ನಡ ಭವನದ ಕನಸು ನನಸಾಗುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರವು ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಸಿದೆ. ಶೀಘ್ರದಲ್ಲಿಯೇ ಖನ್ನಡ ಭವನ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ನಡೆಯಲಿದೆ. ಹೌದು ಗೋವಾದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ್ ಹಾಗೂ ಕಾರ್ಯದರ್ಶಿಗಳಾದ ಪ್ರಕಾಶ್ ಮತ್ತೀಹಳ್ಳಿ ರವರು ಈಗಾಗಲೇ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜುಲೈ 30 ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಗೋವಾದ ವೆರ್ಣಾ ಜಂಕ್ಷನ್ ನಲ್ಲಿರುವ ಕೇಸರವಾಲ್ ಗಾರ್ಡನ್ ನಲ್ಲಿ ಗೋವಾದ ಎಲ್ಲ ಕನ್ನಡಪರ ಸಂಘಟನೆಗಳ ಸಭೆ ಕರೆಯಲಾಗಿದೆ.
ಈ ಸಭೆಯಲ್ಲಿ ಗೋವಾದ ಎಲ್ಲ ಕನ್ನಡಪರ ಸಂಘಟನೆಯ ಪ್ರಮುಖರು ಖಡ್ಡಾಯವಾಗಿ ಉಪಸ್ಥಿತಿಯಿದ್ದು ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಕುರಿತಂರೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ರವರು ಮಾಹಿತಿ ನೀಡಿದ್ದಾರೆ.
ಕಳೆದ ಹಲವು ವರ್ಷಗಳ ಗೋವಾ ಕನ್ನಡಿಗರ ಕನಸು ಇಂದು ನನಸಾದಂತಾಗಿದೆ. ಗೋವಾದ ಕನ್ನಡಿಗರಿಗೆ ಒಂದು ವೇದಿಕೆಯಾಗಬಹುದಾದ ಕನ್ನಡ ಭವನ ನಿರ್ಮಾಣಕ್ಕೆ ಗೋವಾದಲ್ಲಿ ಕರ್ನಾಟಕ ಸರ್ಕಾರ ಜಾಗ ಖರೀದಿಸಿದೆ. ಇದರಿಂದಾಗಿ ಶೀಘ್ರದಲ್ಲಿಯೇ ಗೋವಾ ಕನ್ನಡಿಗರ ಬಹು ವರ್ವಗಳ ಕನಸು ನನಸಾದಂತಾಗಿದೆ. ಇತರ ರಾಜ್ಯಗಳಲ್ಲಿರುವಂತೆಯೇ ಗೋವಾದಲ್ಲಿಯೂ ಕನ್ನಡ ಭವನ ನಿರ್ಮಾಣಗೊಳ್ಳಲಿದೆ.
ಕಳೆದ ಸುಮಾರು ಒಂದು ವರ್ಷದಿಂದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಸಲು ಪ್ರಯತ್ನ ನಡೆಸಿತ್ತು. ಹತ್ತಾರು ಜಾಗದ ಕಾಗದಪತ್ರ ಪರಿಶೀಲಿಸಿ ಜಾಗವನ್ನೂ ವೀಕ್ಷಿಸಿದ್ದರು. ಆದರೆ ಇದೀಗ ಈ ಪ್ರಯತ್ನಕ್ಕೆ ಫಲ ಸಿಕ್ಕಿದಂತಾಗಿದೆ.ಬಹು ವರ್ಷಗಳ ಪ್ರಯತ್ನದ ಫಲವಾಗಿ ಇಷ್ಟೇ ಅಲ್ಲದೆಯೇ ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕೆಂಬ ಕರ್ನಾಟಕ ಗಡಿ ಪ್ರದೇಶ ಅಧ್ಯಕ್ಷರಾದ ಸೋಮಣ್ಣ ಬೇವಿನ್ ಮರದ್ ಹಾಗೂ ಕಾರ್ಯದರ್ಶಿಗಳಾದ ಪ್ರಕಾಶ ಮತ್ತೀಹಳ್ಳಿ ರವರ ಮೂಲಕ ಕನ್ನಡ ಭವನ ನಿರ್ಮಾಣ ಕನಸು ನನಸಾಗಿದೆ. ಗೋವಾದ ವಿವಿಧ ಕನ್ನಡ ಸಂಘಟನೆಗಳ ಹೋರಾಟಕ್ಕೆ ಫಲ ಸಿಕ್ಕಿದಂತಾಗಿದೆ.