ಸುದ್ಧಿಕನ್ನಡ ವಾರ್ತೆ
ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕರ್ನಾಟಕದ ಕಾರ್ಮಿಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗೋವಾದಲ್ಲಿ ನಡೆದಿದೆ.

ಗೋವಾದ ವಾಸ್ಕೊ ಸಮೀಪದ ಜುವಾರಿನ್ಗರದಲ್ಲಿ ಉತ್ತರಕರ್ನಾಟಕ ಮೂಲದ ಬಸವರಾಜ್ ಅರಕೇರಿ ಎಂಬ ಕಾರ್ಮಿಕ ಭಾರಿ ಮಳೆಯ ಸಂದರ್ಭದಲ್ಲಿ ನಿರ್ಮಾಣ ಹಂತದ ಕಟ್ಟಡಲ್ಲಿ ಮೂರನೇಯ ಮಹಡಿಯ ಮೇಲೆ ನಿಂತು ಕೆಲಸ ನಿರ್ವಹಿಸುತ್ತಿದ್ದ. ಅಲ್ಲಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಕೆಳಕ್ಕೆ ಬಿದ್ದು ಬಸವರಾಜ್ ಅರಕೇರಿ ಸಾವನ್ನಪ್ಪಿದ್ದಾನೆ.

ಮೂರನೇಯ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈ ಕಾರ್ಮಿಕನಿಗೆ ಯಾವುದೇ ಸೇಪ್ಟಿ ಬೆಲ್ಡ ನೀಡಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಈ ದುರ್ಘನೆ ಸಂಭವಿಸಿದೆ ಎನ್ನಲಾಗಿದೆ. ನಿರ್ಲಕ್ಷ ತೋರಿದ್ದಕ್ಕೆ ಸ್ಥಳದ ಮಾಲೀಕರು ಮತ್ತು ಮೇಲ್ವಿಚಾರಕರ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.